s.mareppa 
ಜಿಲ್ಲೆ

ಒಳ ಮೀಸಲಾತಿ ವಿಚಾರ ಸರ್ಕಾರ ಅನ್ಯಾಯ ಮಾಡಿದೆ- ಮಾರೆಪ್ಪ

ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲು ವರ್ಗೀಕರಣದಲ್ಲಿ ಅಲೆಮಾರಿ ಸಮೂದಾಯಗಳಿಗೆ ಅನ್ಯಾಯ ಮಾಡಲಾಗಿದ್ದು, ಸರ್ಕಾರ ಕೂಡಲೇ ಶೇ.1 ಮೀಸಲಾತಿಯನ್ನು ಅಲೆಮಾರಿಗಳಿಗೆ ಹಂಚಿಕೆ ಮಾಡುವವರಿಗೆ ಹೋರಾಟ ಮುಂದುವರೆಯಲಿದೆ ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಎಸ್.ಮಾರೆಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಹೊಲೆಯ, ಲಂಬಾಣಿ, ವಡ್ಡರ ಸಮೂದಾಯಗಳ 26 ಜನ ಶಾಸಕರು, ಸಚಿವರುಗಳ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಂಡಿದೆ. ನ್ಯಾ. ನಾಗಮೋಹನ ದಾಸ್ ಆಯೋಗ ಶಿಫಾರಸ್ಸುಗಳನ್ನು ಸಹ ಪರಿಗಣಿಸದೇ ಒತ್ತಡಕ್ಕೆ ಮಣಿದು ಮಾದಿಗ ಸಮಾಜಕ್ಕೆ ಶೇ.6, ಹೊಲೆಯ ಸಮುದಾಯಕ್ಕೆ ಶೇ.6 ಮತ್ತು ಲಂಬಾಣಿ, ಭೋವಿ, ಕೊರಚ, ಕೊರಮ ಅಲೆಮಾರಿಗಳಿಗೆ ಶೇ.5 ರಷ್ಟು ಮೀಸಲು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ಹಿಂದಿನ ಮೂರು ಆಯೋಗಗಳು ನೀಡಿದ್ದ ಶಿಫಾರಸ್ಸುಗಳಿಂದ ವ್ಯತಿರಿಕ್ತವಾಗಿ ಹೊಲೆಯ ಸಂಬಂಧಿತ ಶೇ.6 ಮತ್ತು ಸ್ಪೃಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಸಮೂದಾಯಗಳಿಗೆ ಶೇ.1 ಮೀಸಲು ಹೆಚ್ಚುವರಿ ಪಡೆದಿರುವದು ರಾಜಕೀಯ ಪ್ರಾಭಲ್ಯವೇ ಹೊರತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಮಾತನಾಡುತ್ತಲೇ ಪ್ರಭಾವಕ್ಕೆ ಒಳಗಾಗಿ ಅಸ್ಪಶ್ಯ 49 ಅಲೆಮಾರಿ ಸಮೂದಾಯಗಳಿಗೆ ಐತಿಹಾಸಿಕ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕೊಪ್ಪರ, ಆಂಜಿನಯ್ಯ ಕುರುಬದೊಡ್ಡಿ, ತಾಯಪ್ಪ ಗಧಾರ, ಅಬ್ರಹಾಂ , ಜಂಬಣ್ಣ, ಕೃಷ್ಣ ಇದ್ದರು.