ಜಿಲ್ಲೆ

ಪೊಲೀಸ್​ ಎಂದು ಹೇಳಿ ಚಿನ್ನದ ಸರ ಕಳವು


ಮಧುಗಿರಿ: ಪಟ್ಟಣದಲ್ಲಿ ಶನಿವಾರ ಅಪರಿಚಿತನೊಬ್ಬ ಮಹಿಳೆಯ ಗಮನ ಬೇರೆಡೆ ಸೆಳೆದು ಮೈಮೇಲಿದ್ದ 70 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾನೆ. ಪಟ್ಟಣದ ವಾಸವಿ ಎಲೆಕ್ಟ್ರಿಕಲ್​ ಮತ್ತು ಹಾರ್ಡ್​ವೇರ್​ ಅಂಗಡಿಯ ಮಾಲೀಕ ವೆಂಕಟಾಚಲಪತಿ ಅವರ ಪತ್ನಿ ಸುಧಾವಾಣಿ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅಪರಿಚಿತನೊಬ್ಬ ಬಂದು ಮಾತನಾಡಿಸಿ, ಈ ರೀತಿ ಚಿನ್ನದ ಸರ ಹಾಕಿಕೊಂಡು ಹೋಗಬೇಡಿ. ಕಳ್ಳರ ಕಾಟ ಹೆಚ್ಚಾಗಿದೆ. ನಾನು ಪೊಲೀಸ್​ ಸಿಬ್ಬಂದಿ ಎಂದು ಹೇಳಿ ಚಿನ್ನದ ಸರ ಬಿಚ್ಚಿಸಿ ಬ್ಯಾಗೊಂದರಲ್ಲಿ ಪ್ಯಾಕ್​ ಮಾಡಿ ಕೊಟ್ಟಿದ್ದಾನೆ. ಮನೆಗೆ ಬಂದು ಬ್ಯಾಗ್​ ನೋಡಿದಾಗ ಸುಧಾವಾಣಿಗೆ ಮೋಸ ಹೋಗಿರುವುದು ತಿಳಿದುಬಂದಿದೆ. ಈ ಸಂಬಂಧ ಮಧುಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.