ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ದೀಪ್ತಿ ಗಿಡ ನೆಟ್ಟರು. ಶಿವಕುಮಾರ್, ಶಫಿ ಅಹಮ್ಮದ್, ವಿದ್ಯಾ, ಕವಿತಾ, ಅಂಬಿಕಾ, ರಾಜೇಶ್ ಇತರರಿದ್ದರು. 
ಜಿಲ್ಲೆ

10 ಸಾವಿರ ಗಿಡ ನೆಡುವ ಗುರಿ

ಎನ್.ಆರ್.ಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅರಣ್ಯ ಇಲಾಖೆ ಸಹಕಾರದೊಂದಿಗೆ ಶೃಂಗೇರಿ ತಾಲೂಕಿನಲ್ಲಿ 10 ಸಾವಿರ ಗಿಡ ನೆಡುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಯೋಜನೆಯ ಕೃಷಿ ಅಧಿಕಾರಿ ಶಿವಕುಮಾರ್ ತಿಳಿಸಿದರು.

ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎನ್.ಆರ್.ಪುರ ತಾಲೂಕಿನಲ್ಲೂ 4 ಸಾವಿರ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು. ಕೊಪ್ಪ ವೃತ್ತ ಉಪ ವಲಯ ಅರಣ್ಯಾಧಿಕಾರಿ ಶಫಿ ಅಹಮ್ಮದ್ ಪರಿಸರದ ಮಾಹಿತಿ ನೀಡಿದರು. ಶಾಲಾ ಆವರಣದಲ್ಲಿ ಪನ್ನೇರಳೆ, ನಿಂಬೆ, ಕಿತ್ತಳೆ, ಹಲಸು, ಮಹಾಘನಿ, ಕರಿಬೇವು ಗಿಡಗಳನ್ನು ನೆಡಲಾಯಿತು. ಒಕ್ಕೂಟದ ಅಧ್ಯಕ್ಷ ರಾಜೇಶ್, ಎಸ್‌ಡಿಎಂಸಿ ಅಧ್ಯಕ್ಷೆ ದೀಪ್ತಿ, ಗ್ರಾಪಂ ಅಧ್ಯಕ್ಷೆ ವಿದ್ಯಾ, ಸದಸ್ಯರಾದ ಕವಿತಾ, ಅಂಬಿಕಾ, ಮುಖ್ಯಶಿಕ್ಷಕಿ ಲೀನಾ ಡಿ. ಕಾಸ್ಟಾ, ಸುಧೀರ್, ಧ್ರುವ ಇದ್ದರು.