ಹೊಸಕೋಟೆ : ಸುಖ, ಶಾಂತಿ ಬಯಸುವ ಮನುಷ್ಯ ಜೀವನದಲ್ಲಿ ಕೆಲವು ಆದರ್ಶ ಮೌಲ್ಯ ಬೆಳೆಸಿಕೊಳ್ಳಬೇಕು. ಬಾಳಿನ ವಿಕಾಸಕ್ಕೆ ಗುರಿ ಮತ್ತು ಗುರು ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ನಗರದ ಎಚ್ಜೆಎಸ್ಎಸ್ ಕನ್ವೆನ್ಷನ್ ಹಾಲ್ನಲ್ಲಿ ಸೋಮವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ 10ನೇ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಲಿಂಗಾಯತ ಧರ್ಮ ಎಲ್ಲರಿಗೂ ಒಳಿತನ್ನೇ ಮಾಡಿದೆ, ಜೀವನದಲ್ಲಿ ಹಣಗಳಿಕೆಯಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನ ಮತ್ತು ಗುರುಗಳ ಮಾರ್ಗದರ್ಶನ ಪಡೆಯಲು ಶ್ರಮಿಸಬೇಕು, ಭೌತಿಕ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಸಂಪತ್ತು ಬಾಳಿನ ನಿಜವಾದ ಸಂಪತ್ತು ಎಂಬುದು ಮರೆಯಬಾರದು ಎಂದರು.
ಶ್ರೀಜಗದ್ಗುರು ರೇಣುಕಾಚಾರ್ಯರ ಜೀವನ ಮೌಲ್ಯದ ಸತ್ಯ ಚಿಂತನೆಗಳು ಬೆಳಕು ತೋರುತ್ತವೆ. ಒಡೆದು ಹೋದ ಮನಸ್ಸನ್ನು ಒಗ್ಗೂಡಿಸಲು ಧರ್ಮದಿಂದ ಸಾಧ್ಯವೇ ಹೊರತು ಜಾತಿಯಿಂದ ಸಾಧ್ಯವಾಗದು. ಅವರು ಬೋಧಿಸಿದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದು ಹೇಳಿದರು. ಗುಮ್ಮಳಾಪುರ ಸಂಸ್ಥಾನ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಜಿ, ತಾಲೂಕಿನ ವೀರಶೈವ ಲಿಂಗಾಯತ ಸೇವಾ ಸಮಾಜದ ಅದ್ಯಕ್ಷ ಶಿವಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅದ್ಯಕ್ಷ ಗುರುಬಸಪ್ಪ, ಆಗಮಿಕ ಅರ್ಚಕ ಸಂದ ನಟರಾಜ ಶಾಸಿ, ವೀರಶೈವ ಲಿಂಗಾಯತ ಬಸವ ಸಮಿತಿ ಅದ್ಯಕ್ಷ ಮಂಜುನಾಥ್ ಇದ್ದರು.
ದಾಸೋಹ ಶುರು ಮಾಡಿದ್ದೇ ಮಠಗಳು : ರಂಭಾಪುರಿ ಶ್ರೀಗಳ ಕಾರ್ಯಕ್ರಮ ಹೊಸಕೋಟೆ ತಾಲೂಕಿನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದು. ವೀರಶೈವ&ಲಿಂಗಾಯತ ಮಠಗಳ ಪರಂಪರೆಯಿಂದ ಜಾತಿಭೇದವಿಲ್ಲದೆ ಲಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನಡೆಯುತ್ತಿದೆ, ಈ ಕಾರ್ಯ ಕೇವಲ ಮಠಗಳಿಂದ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಮಕ್ಕಳಿಗೆ ಅನ್ನ, ಆಹಾರ ಹಾಗೂ ಆರೋಗ್ಯದ ದಾಸೋಹ ಶುರು ಮಾಡಿದ್ದೇ ಮಠಗಳು, ಧರ್ಮ, ಜಾತಿ ಲಿಂಗಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುವ ಧರ್ಮ ಎಂದರೆ ಅದು ವೀರಶೈವ&ಲಿಂಗಾಯತ ಧರ್ಮ ಎಂದರು.
ಹೊಸಕೋಟೆಯಲ್ಲಿ ಮೊದಲ ಬಾರಿಗೆ ಶ್ರೀ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಇಷ್ಟಲಿಂಗ ಪೂಜೆ ಹಾಗೂ ಧರ್ಮಜಾಗೃತಿ ಸಮಾವೇಶ ಮಾಡಿರುವುದು ಉತ್ಸಾಹ ತಂದಿದೆ, ಪೀಠದ ಮೇಲಿನ ಅಭಿಮಾನಕ್ಕೆ ಈ ಕಾರ್ಯಕ್ರಮ ಸಾ, ಈ ಕಾರ್ಯಕ್ರಮಕ್ಕೆ ಕಳೆದ ನಾಲ್ಕು ತಿಂಗಳಿಂದ ತಯಾರಿ ನಡೆಸಿದ ಎಲ್ಲರಿಗೂ ಗುರುಗಳ ಶ್ರೀರೆ ಇರಲಿ. > ಶ್ರೀಪಟ್ಟದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ನಾಗಲಾಪುರ ಸಂಸ್ಥಾನ ಮಠ. ಹೊಸಕೋಟೆಯಲ್ಲಿ ಶ್ರೀರೇಣುಕಾಚಾರ್ಯರ ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ ದಾನಿಗಳಿಂದ ದೇವಾಲಯ ನಿರ್ಮಾಣ ಮಾಡಿಕೊಂಡ ನಂತರ ಮಠದಿಂದ ಶಿವಲಿಂಗವನ್ನು ನೀಡಿ ಈ ಭಾಗದಲ್ಲೂ ನಮ್ಮ ಪರಂಪರೆಯನ್ನು ಇನ್ನೂ ಪ್ರಚಲಿತಕ್ಕೆ ತರುವ ಪ್ರಯತ್ನಕ್ಕೆ ಶಾಸಕರಾದಿಯಾಗಿ ಎಲ್ಲರೂ ಮುಂದೆ ಬರಬೇಕು. > ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು ವೀರಶೈವ&ಲಿಂಗಾಯತ ಸಮಾಜದ ಮನವಿಯಂತೆ ಬಸವ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಒಂದು ಕೋಟಿ ಅನುದಾನದ ಭರವಸೆ ನೀಡಿ ಕೇವಲ 25 ಲಕ್ಷ ರೂಪಾಯಿ ನೀಡಿತ್ತು, ಇನ್ನುಳಿದ 75 ಲಕ್ಷ ಹಣವನ್ನು ಬಿಡುಗಡೆ ಮಾಡಿಸಿಕೊಡುವುದರ ಜತೆ ವೈಯಕ್ತಿಕವಾಗಿ ಅನುದಾನ ನೀಡಿ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಿಕೊಡುತ್ತೇನೆ. > ಶರತ್ ಬಚ್ಚೇಗೌಡ ಶಾಸಕ