ಪಿರಿಯಾಪಟ್ಟಣ: ಅಂಬೇಡ್ಕರ್ ಅವರ ಅವಿರತ ಹೋರಾಟದ ಫಲವಾಗಿ ಇಂದು ಭಾರತದಲ್ಲಿನ ಪ್ರತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯ ದೊರಕಿದೆ ಎಂದು ಉಪನ್ಯಾಸಕ ಮುತ್ತಿಗೆರೆ ದೇವರಾಜ್ ದ್ರಾವಿಡ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಪ್ರತಿಯೊಬ್ಬರಿಗೂ ಸಮಾನತೆ, ಹಕ್ಕು ಮತ್ತು ಸ್ವಾತಂತ್ರೃದ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ಅಂಬೇಡ್ಕರ್ ರವರು ಪ್ರತಿ ಕ್ಷಣಕ್ಕೂ ಗೌರವಿಸಲ್ಪಡುತ್ತಿರುವ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು. ಸಮಾನತೆ ಮತ್ತು ಸ್ವಾಭಿಮಾನದ ಬದುಕನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಅವಿಸ್ಮರಣೀಯವಾದದ್ದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ ಇಂದು ದೇಶದ ಪ್ರತಿಯೊಬ್ಬರು ಸಮಾನತೆಯ ಮೂಲಕ ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ ಎಂದರು. ಏ.26ರಂದು ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ನಿಸರ್ಗ ಪ್ರಿಯಾ, ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಸದಸ್ಯ ರವಿ, ಮಂಜುನಾಥ್, ತಮ್ಮಣ್ಣಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ, ತಾ.ಪಂ.ಇಒ ಸುನೀಲ್ ಕುಮಾರ್, ಮುಖಂಡರಾದ ಡಿ.ಟಿ.ಸ್ವಾಮಿ, ಎ.ಕೆ.ಗೌಡ, ಎಸ್.ರಾಮು, ತಿಮ್ಮನಾಯಕ, ಟಿ.ಈರಯ್ಯ, ಈರಾಜ್, ಶೇಖರ್ , ಸೀಗೂರು ವಿಜಯ್ ಕುಮಾರ್, ರಾಮಚಂದ್ರ , ರವಿ ಚಪ್ಪರದಳ್ಳಿ, ಮಾದೇವ, ನಾಗೇಂದ್ರ ಜವರಪ್ಪ, ಆದಿಶೇಷ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಗೌಡ, ಪೊಲೀಸ್ ವೃತ್ತ ನಿರೀಕ್ಷಕ ಗೋವಿಂದ ರಾಜ್, ಆರ್‌ಎಫ್‌ಒ ಪದ್ಮಶ್ರೀ, ಟಿಎಚ್‌ಒ ಡಾ.ಶ್ರೀನಿವಾಸ್, ಶಿರಸ್ತೆದಾರ್ ಶಕೀಲಾಬಾನು, ವಿವಿಧ ಇಲಾಖೆಯ ಅಧಿಕಾರಿಗಳಾದ ಪ್ರಸಾದ್, ಡಾ.ಸೋಮಯ್ಯ, ವೆಂಕಟೇಶ್, ಹಿತೇಂದ್ರ, ಮುನಿಯಪ್ಪ, ಕೃಷ್ಣಮೂರ್ತಿ ಇತರರು ಇದ್ದರು.