ಗಜೇಂದ್ರಗಡ: ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಿದ್ದು, ಪುರಸಭೆ ವಿರೋಧ ಪಕ್ಷದ ನಾಯಕ ಮುರ್ತುಜಾ ಡಾಲಾಯತ ಅವರು ತಮ್ಮ ವಾರ್ಡ್‌ನ ಜನತೆಗೆ ಉಚಿತವಾಗಿ ನೋಂದಣಿ ಕಾರ್ಯ ಮಾಡುತ್ತಿರುವುದು ಅನುಕರಣೀಯ ಎಂದು ಪುರಸಭೆ ಮಾಜಿ ಸದಸ್ಯ ಸಿದ್ದಣ್ಣ ಬಂಡಿ ಹೇಳಿದರು.
ಪಟ್ಟಣದ 13ನೇ ವಾರ್ಡ್‌ನ ಕಲಾಲ ಸಮುದಾಯ ಭವನದಲ್ಲಿ ಆರಂಭಿಸಿರುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಚಿತ ನೋಂದಣಿ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಹಾಗೂ ವಾರ್ಡ್‌ನ ಜನರಿಗೆ ಗೃಹಜ್ಯೋತಿ ನೋಂದಣಿ ಪತ್ರ ವಿತರಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ಸಾಮಾಜಿಕ ಕೆಲಸಗಳ ಮೂಲಕ ಮುರ್ತುಜಾ ಅವರು ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ಘೋಷಿಸಿದ್ದ ಐದು ಯೋಜನೆಗಳಲ್ಲಿ ಶಕ್ತಿ ಯೋಜನೆ ಪ್ರಾರಂಭವಾಗಿ ಮಹಿಳೆಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮುರ್ತುಜಾ ಡಾಲಾಯತ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ನಿತ್ಯದ ಕೆಲಸಗಳನ್ನು ಬಿಟ್ಟು ದಿನಪೂರ್ತಿ ನೆಟ್ ಸೆಂಟರ್‌ಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನಮ್ಮ ವಾರ್ಡ್‌ನ ಜನರು ಈ ತೊಂದರೆ ಅನುಭವಿಸಬಾರದೆಂದು ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಶಾಸಕ ಜಿ.ಎಸ್. ಾಟೀಲ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಜನತೆಗೆ ನೋಂದಣಿ ಕೇಂದ್ರವನ್ನು ಆರಂಭಿಸುವ ಯೋಚನೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಪ್ಪು ಮತ್ತಿಕಟ್ಟಿ, ಹೂವಾಜಿ ಚಂದೂಕರ, ಶರಣಪ್ಪ ಚುರ್ಚಿಹಾಳ, ಮಂಜುನಾಥ ಕಲಾಲ, ಜ್ಯೋತಿ ಶಿಂಧೆ, ಶಾಂತಾಬಾಯಿ ವಾಗ್ಮೋಡೆ, ಸುರೇಶ ಕಲಾಲ, ರಾಜಮ್ಮ ಕಲಾಲ, ನಿರ್ಮಲಾ ಕಲಾಲ, ಅಮರೇಶ ಕವಡಿಮಟ್ಟಿ, ದಾವಲಸಾಬ ಆರಗಿದ್ದಿ, ಈರಮ್ಮ ಕಲಾಲ, ಸುಂದರಮ್ಮ ಕಲಾಲ, ಮಮತಾಜಬಿ ಗಣಪುರಿ, ಬಿಬಿಜಾನ ಡಾಲಾಯತ, ಸರಸ್ವತಿ ಕಮ್ಮಾರ ಸೇರಿದಂತೆ ಇತರರು ಇದ್ದರು.