ಅವಿನಾಶ್ ಜೈನಹಳ್ಳಿ ಮೈಸೂರು
ಸ್ವದೇಶಿ ನಿರ್ಮಿತ ಭಾರತೀಯ ನೌಕಾದಳದ ಮೊದಲ ಯುದ್ಧ ನೌಕೆ ‘ಐಎನ್‌ಎಸ್ ವಿಕ್ರಾಂತ್’ ಶೀಘ್ರದಲ್ಲೇ ಮೈಸೂರಿಗೆ ಆಗಮಿಸಲಿದೆ. ಅಷ್ಟೇ ಅಲ್ಲ ! ದೆಹಲಿಯ ಕೆಂಪು ಕೋಟೆಯೂ ಸಾಂಸ್ಕೃತಿಕ ನಗರಿಯಲ್ಲಿ ನಿರ್ಮಾಣಗೊಳ್ಳಲಿದೆ. ಬಿಫಿನ್ ರಾವತ್ ಕೂಡ ಪ್ರತ್ಯಕ್ಷರಾಗಿಲದ್ದಾರೆ.
ಅಯ್ಯೋ ಏನಿದು…ಸಮುದ್ರವಿಲ್ಲ ಊರಿಗೆ ಬರಲು ಹೇಗೆ ಸಾಧ್ಯ ? ಬಿಫಿನ್ ರಾವತ್ ನಿಧನರಾಗಿಲ್ಲವಾ? ಮೈಸೂರಿನಲ್ಲಿ ಕೆಂಪುಕೋಟೆ ನಿರ್ಮಾಣವಾಗಲಿದೆಯೇ ಎಂದು ಯೋಚಿಸಬೇಡಿ.
ಅಂದಹಾಗೆ 2022ರ ನಾಡಹಬ್ಬ ದಸರಾ ಉತ್ಸವಕ್ಕೆ ಅಂಬಾವಿಲಾಸ ಅರಮನೆ ಆವರಣದಲ್ಲೂ ಈ ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಅರಮನೆ ಮಂಡಳಿ ಸಿದ್ಧತೆ ನಡೆದಿದೆ.
ಭಾರತ ಸ್ವಾತಂತ್ರೃದ ಅಮೃತ ಮಹೋತ್ಸವ ಆಚರಿಸಿಕೊಂಡ ಹಿನ್ನೆಲೆ 75ನೇ ಸ್ವಾತಂತ್ರೃದ ಅಮೃತ ಮಹೋತ್ಸವ ಪರಿಕಲ್ಪನೆ ಇಟ್ಟುಕೊಂಡು ಫಲಪುಷ್ಪ ಪ್ರದರ್ಶನ ಆಯೋಜಿಸಲು ಅರಮನೆ ಆಡಳಿತ ಮಂಡಳಿ ನಿರ್ಧರಿಸಿದೆ. ಅಲ್ಲಿನ ಫಲಪುಪ್ಪ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶಕ್ಕೆ ಸಮರ್ಪಿಸಿದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ‘ಐಎನ್‌ಎಸ್ ವಿಕ್ರಾಂತ್’ ಮಾದರಿಯನ್ನು ಹೂವಿನಿಂದ ನಿರ್ಮಿಸಲು ಚಿಂತಿಸಲಾಗಿದೆ. ವಿಕ್ರಾಂತ್‌ನೌಕೆ ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು ಇದಾಗಿರುವುದು ವಿಶೇಷ. ಅದರ ಮಾದರಿನ್ನು ಸಾರ್ವಜನಿಕರು ಅರಮನೆ ಅಂಗಳದಲ್ಲಿ ವೀಕ್ಷಿಸಬಹುದಾಗಿದೆ.
ಜತೆಗೆ ಇತ್ತೀಚೆಗೆ ಮೃತಪಟ್ಟ ಭಾರತೀಯ ಸೇನಾ ದಂಡನಾಯಕರಾಗಿದ್ದ ಬಿಫಿನ್ ರಾವತ್ ಅವರ ಪ್ರತಿಮೆಯನ್ನು ಹೂನಲ್ಲಿ ನಿರ್ಮಿಸಲಾಗುತ್ತದೆ.
ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಮಂಡಳಿ ನವರಾತ್ರಿ ದಸರಾ ಉತ್ಸವದಲ್ಲಿ ಒಂಭತ್ತು ದಿನಗಳ ಕಾಲ ಅರಮನೆ ಅಂಗಳದಲ್ಲಿ ಬಗೆ ಬಗೆಯ ಹೂಗಳಿಂದ ಹತ್ತಾರು ಪ್ರತಿಕೃತಿ ರಚಿಸಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲು ಮುಂದಾಗಿದೆ.
ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಹೊಸಬಗೆಯ ವಾತಾವರಣ ಸೃಷ್ಟಿಸುವ ಸುಲುವಾಗಿ ಫಲಪುಷ್ಪ ಪ್ರದರ್ಸನ ಏರ್ಪಡಿಸಿದ್ದು, ಸೆ.26ರಂದು ಉದ್ಘಾಟಗೊಳ್ಳಲಿದೆ. ಒಂಭತ್ತು ದಿನಗಳಕಾಲ ಇರುವ ಫಲಪುಷ್ಪ ಪ್ರದರ್ಶನವನ್ನು ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತದೆ.
ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ನೆನಪಿನಲ್ಲಿ ಇಟ್ಟುಕೊಳ್ಳಲುವ ದೃಷ್ಟಿಯಿಂದ ನಾನಾ ಬಗೆಯ ಮಾದರಿಗಳನ್ನು ಹೂಗಳಲ್ಲಿ ನಿರ್ಮಿಸಲು ಮುಂದಾಗಿದೆ.
ಗಮನ ಸೆಳೆಯಲಿದೆ ಕರ್ತವ್ಯ ಪಥ:
ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ಐತಿಹಾಸಿಕ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ತಾ ಲಾನ್ಸ್‌ನ್ನು ‘ಕರ್ತವ್ಯ ಪಥ್’ ಎಂದು ಮರುನಾಮಕರಣ ಮಾಡಲಾಗಿದೆ. ಕರ್ತವ್ಯ ಪಥ ಮಾದರಿಯನ್ನು ನಿರ್ಮಿಸಲು ಮುಂದಾಗಿದೆ. ದೆಹಲಿಯ ಕೆಂಪುಕೋಟೆ ಮಾದರಿ, ಸುಭಾಷ್‌ಚಂದ್ರ ಬೋಸ್ ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಗಿದೆ. ವಿಂಗ್ ಕಮಾಂಡರ್ ಅಭಿಮಾನ್ ವರ್ಧಮಾನ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಪ್ರತಿಕೃತಿ ಹಾಗೂ ಸೆಲ್ಫಿ ಪಾಯಿಂಟ್, ಜಂಬೂ ಸವಾರಿ ಮೆರವಣಿಗೆ, ಕಾರ್ಗಿಲ್ ಯುದ್ಧದ ವಿಜಯೋತ್ಸವ ಮಾದರಿ, ಸರ್ದಾರ್ ವಲ್ಲಭಬಾತ್ ಪಟೇಲ್ ಮಾದರಿ ಸೇರಿದಂತೆ ಅನೇಕ ಮಾದರಿ ನಿರ್ಮಿಸಲು ಚಿಂತಿಸಲಾಗಿದೆ.
15 ಸಾವಿರ ಹೂ ಕುಂಡ: ಪ್ರಸಕ್ತ ದಸರಾ ಉತ್ಸವದಲ್ಲಿ ಅರಮನೆಯ ಅಂದ ಹೆಚ್ಚಿಸಲು ಮತ್ತು ಫಲಪುಷ್ಪ ಪ್ರದರ್ಶನಕ್ಕಾಗಿ ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯಾ ಸೇರಿದಂತೆ 32 ಜಾತಿಯ ಹೂಗಳಿರುವ 15 ಸಾವಿರ ಅಲಂಕಾರಿಕ ಹೂವಿನ ಕುಂಟಗಳನ್ನು ಜೋಡಿಸಲು ಸಿದ್ಧತೆ ನಡೆಸಲಾಗಿದೆ. ಇದರ ಜೊತೆಗೆ ಗುಲಾಬಿ, ಜರ್ಬೆರಾ, ಆರ್ಕಿಡ್ಸ್, ಬ್ಲೂ ಡೈಸಿ, ಕ್ರೈಸಾಂಥಿಮಮ್, ಡ್ರೆಸಿನಾ ಸೇರಿದಮತೆ 15ಕ್ಕೂ ವಿವಿಧ ಜಾತಿಯ 4 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿದೆ.
ಬೊಂಬೆ ಪ್ರದರ್ಶನ: ದಸರಾ ಉತ್ಸವದದಲ್ಲಿ ಬೊಂಬೆ ಮನೆ ಪ್ರಮುಖವಾಗಿದ್ದು, ಅದಕ್ಕಾಗಿ ಈ ಬಾರಿ ಆಯ್ದ ಏಳು ಮಂದಿ ಅರಮನೆ ಆವರಭದಲ್ಲಿ ಬೊಂಬೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಷ್ಟೂ ಮಂದಿಯೀ ಸ್ವಾತಂತ್ರೃದ ಅಮೃತ ಮಹೋತ್ಸವ, ಶ್ರೀ ದೇವಿ ದಿವ್ಯದರ್ಶನ, ಮಾನವನ ಜೀವನ ಕ್ರಮ, ಅರಮನೆಯಲ್ಲಿ ದುರ್ಗಾ ಪೂಜೆ, ವಿಷ್ಣು ಲೀಲೆ, ಸಾಂಸ್ಕೃತಿಕ ದಸರಾ ಬೊಂಬೆ ಹಾಗೂ ಕೃಷ್ಣನ ಲೀಲೆಗಳು ಎಂಬ ಪರಿಕಲ್ಪನೆ ಇಟ್ಟುಕೊಂಡು ಬೊಂಬೆಗಳನ್ನು ಪ್ರದರ್ಶಿಸಲಿದ್ದಾರೆ.
ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ವೀಡಿಯೋ ಪ್ರದರ್ಸನವನ್ನು ಹಮ್ಮಿಕೊಳ್ಳಲಾಗಿದೆ. ರಾಜವಂಶಸ್ಥರ ಅಪರೂಪದ ಚಿತ್ರಗಳು, ಅಂದು ಇಂದು ಒಡೆಯರ್ ರೋಲ್ ಸಾಕ್ಷಾೃ ಚಿತ್ರಗಳು ಇರಲಿವೆ.-ಟಿ.ಎಸ್.ಸುಬ್ರಹ್ಮಣ್ಯ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ