RAICHUR 
ಜಿಲ್ಲೆ

ವರ್ಷದ ಮೊದಲ ಹಬ್ಬ ಯುಗಾದಿ ಕಳೆ- ಗಗನಕ್ಕೇರಿದ ಹಣ್ಣು ತರಕಾರಿಗಳು ಬಿಸಿಲಿನ ಜಳಕ್ಕೆ ಹೆದರಿದ ನಾಗರಿಕರು

ರಾಯಚೂರು ಹಳತನ್ನು ಕಳಚಿ ಹೊಸ ಚಿಗುರು ಚಿಗುರಿ ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದೆ. ಯುಗಾದಿ ಎಂದರೆ ಕೇವಲ ಪ್ರಕೃತಿ ಬದಲಾವಣೆ ಮಾತ್ರವಲ್ಲದೆ ಜೀವಿಗಳ ಬದುಕಿನ ಬದಲಾವಣೆಯ, ಅದರಲ್ಲೂ ಜನತೆ ನಮ್ಮ ಆ ವರ್ಷದ ಬದುಕಿಗೆ ಮುನ್ನುಡಿ ಬರೆಯುವ ಹಬ್ಬ. ಯುಗಾದಿ ಆಚರಣೆಗೆ ಜಿ¯್ಲೆಯ ಜನತೆ ಸಜ್ಜಾಗಿz್ದÁರೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಿಂದ ರೈತರು ಕೈತುಂಬ ಬೆಳೆಗಳನ್ನು ಬೆಳೆದಿದ್ದು, ಹಬ್ಬದ ವಾತವರಣ ಕಳೆ ಗುಂದಿದೆ. ಈ ಬಾರಿ ಅನೇಕ ಪದಾರ್ಥಗಳ ದರ ಹೆಚ್ಚಾಗಿದೆ. ಇದರೊಟ್ಟಿಗೆ ತರಕಾರಿ ಹಾಗೂ ತೆಂಗಿನ ಕಾಯಿ ಬೆಲೆಯೂ ಗಗನ ÀÄಮುಖಿಯಗಿದ್ದು, ದರ ಏರಿಕೆಯ ನಡುವೆಯ ಹಬ್ಬದ ಆಚರಣೆ ಮಾಡಬೇಕಾದ ಸ್ಥಿತಿಗೆ ಜನತೆ ಬಂದಿದ್ದಾರೆ.

ಹಣ್ಣುಗಳ ಬೆಲೆ ಏರಿಕೆ:

ಈ ಬಾರಿ ಬೇಸಿಗೆ ಪ್ರಾರಂಭದಲ್ಲಿ ಬಿಸಿಲಿನ ತಾಪಮಾನ ೪೧ಡಿಗ್ರಿ ಸೇ. ಇರುವುದರಿಂದ ಗ್ರಾಹಕರು ಕೇವಲ ಬೆಳಗ್ಗೆ ಹಾಗು ಸಂಜೆ ಮಾತ್ರ ಆಗಮಿಸುತ್ತಿದ್ದು, ನಗರದ ಮಾರುಕಟ್ಟೆಯಲ್ಲಿ ಹಬ್ಬದ ಆಚರಣೆಗೆ ಆಗತ್ಯವಾದ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.

ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು,ಮಾರುಕಟ್ಟೆಯಲ್ಲಿಯೇ ಗಾತ್ರಕ್ಕೆ ಅನುಗುಣವಾಗಿ ಕೆ.ಜಿಗೆ ೬೦ ರಿಂದ ೭೦ರ ತನಕ ಮಾರಾಟವಾಗಿದೆ. ಇದರೊಟ್ಟಿಗೆ ಅಗತ್ಯವಾಗಿ ಬೇಕಾಗಿದ್ದ ತೆಂಗಿನ ಕಾಯಿಯಲ್ಲೂ ದರ ಹೆಚ್ಚಾಗಿದ್ದು, ಒಂದು ಕಾಯಿಗೆ ೩೦ರ ವರೆಗೆ ಮಾರಾಟವಾಗಿದೆ. ವರ್ಷದ ಮೊದಲ ಹಬ್ಬವಾದ ಯುಗಾದಿಗೆ ವ್ಯಾಪಾರ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದು,ಆದರೆ ಬಿಸಿಲು ಹೆಚ್ಚಳವಾಗಿರುವುದರಿಂದ ಕೇಲವರು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವ್ಯಾಪಾರಿಗಳಲ್ಲಿ ನಿರಾಸೆ ಮೂಡಿಸಿದೆ.

ದಿನಸಿ ಪದಾರ್ಥಗಳು

ಯುಗಾದಿ ಹಬ್ಬವೆಂದರೆ ಎಲ್ಲಾರ ಮನೆಯಲ್ಲಿಯೂ ಹೋಳಿಗೆ ಸವಿಯುವುದು ಸಾಮಾನ್ಯ ಆದರೆ ಮಳೆ ಇಲ್ಲದೆ ಇರುವುದರಿಂದ ಪದಾರ್ಥಗಳ ಉತ್ಪಾದನೆ ಕಡಿಮೆಯಾದ ನಿಮಿತ್ತ ಬೆಲೆ ಏರಿಕೆಯೂ ಜನತೆಯನ್ನು ಹೈರಾಣಾಗಿಸಿದೆ. ದಿನಸಿ ಪದಾರ್ಥಗಳು ಸಹ ಗಗನ ಮುಖಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ತೊಗರಿ ಬೆಳೆ ಕೆ.ಜಿ ೧೭೦ ಮಾರಾಟವಾಗುತ್ತಿದೆ. ಉಳಿದಂತೆ ಮೈದಾ ಹಿಟ್ಟಿಗೆ ೪೫, ರವೇ ೪೫, ಹಾಗೂ ಬೆಲ್ಲ ಕೆಜಿಗೆ ೭೫ ,ಪಟಗ ೨೦೦ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ.

ಜವಳಿ ವ್ಯಾಪಾರ ಜೋರು

ಮಳೆ ಬೆಳೆ ಈ ಬಾರಿ ಚನ್ನಾಗಿ ಆಗಿರುವುದರಿಂದ ಗ್ರಾಮೀಣ ಭಾಗದ ರೈತರು ಕುಟುಂಬ ಸಮೇತರಾಗಿ ಮನೆಮಂದಿಗೆಲ್ಲ ಬಟ್ಟೆ ಖರೀದಿ ಮಾಡಲು ಆಗಮಿಸುತ್ತಿರುವುದರಿಂದ ಹಬ್ಬದ ವಾತಾವರಣಕ್ಕೆ ಮತ್ತಷÀÄ್ಟ ರಂಗು ನೀಡಿದೆ. ಹಿಂದೂ ಧರ್ಮದ ಮೊದಲ ಹಬ್ಬದ ಅಂಗವಾಗಿ ಬರಗಾಲದಲ್ಲಿಯೂ ಬಟ್ಟೆ ಖರೀದಿಯಲ್ಲಿ ಜನತೆ ಹೆಚ್ಚು ಆಸಕ್ತಿ ತೋರಿದ್ದು, ಈ ಬಾರಿ ಜವಳಿ ಅಂಗಡಿ ಬಟ್ಟೆ ಖರೀದಿ ಜೋರಾಗಿ ಖಂಡು ಬಂದಿತ್ತು.

ಈ ಬಾರಿ ಉತ್ತಮ ಮಳೆಯಿಂದ ರೈತರ ಬದುಕು ಹಸನಾಗಿದ್ದು, ವರ್ಷದ ಮೊದಲ ಹಬ್ವವನ್ನು ಕುಟುಂಬ ಸಮೇತ ಆಚರಣೆ ಮಾಡುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ದಿನಸಿ ಸೇರಿದಂತೆ ಹಣ್ಣುಗಳ ಬೆಲೆ ಸಹ ಹೆಚ್ಚಳವಾಗಿದೆ. ದರ ಹೆಚ್ಚಳವಾದರು ಸಮಸ್ಯೆ ಇಲ್ಲ ರೈತರು ಜೀವನ ಸಾಗಿಸಲಿ.

ಲಲಿತಾ ಗ್ರಾಹಕರು ರಾಯಚೂರು