The fire burnt the white corn crop 
ಜಿಲ್ಲೆ

ಬೆಂಕಿಗೆ ಬಿಳಿ ಜೋಳದ ಬೆಳೆ ಭಸ್ಮ

Vijayapura - Desk - Doddanagouda Gudihindin

ಹುನಗುಂದ: ತಾಲೂಕಿನ ಹಿರೇಬಾದವಾಡಗಿ ಗ್ರಾಮದ ಹೊಲದಲ್ಲಿ ಕಟಾವಿಗೆ ಬಂದಿದ್ದ ಬಿಳಿ ಜೋಳದ ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಗ್ರಾಮದ ಮಹಾಂತಗೌಡ ಬಸನಗೌಡ್ರ ಅವರಿಗೆ ಸೇರಿದ 2.14 ಎಕರೆ ಬಿಳಿ ಜೋಳದ ಬೆಳೆಗೆ ಶುಕ್ರವಾರ ಮಧ್ಯಾಹ್ನದ ಆಕಸ್ಮಿಕ ಬೆಂಕಿಗೆ ಬಿಳಿ ಜೋಳದ ಬೆಳೆ ಭಸ್ಮವಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಧಗಧಗಿಸುವ ಬೆಂಕಿ ನಂದಿಸಿದರು. ಸ್ಥಳಕ್ಕೆ ಕಂದಾಯ ನಿರೀಕ್ಷ ಲಿಂಗರಾಜ ಹುನಗುಂಡಿ, ಮುಖಂಡ ಮುತ್ತಣ್ಣ ಕಲಗೋಡಿ, ಹಿರೇಬಾದವಾಡಗಿ ಗ್ರಾಪಂ ಅಧ್ಯಕ್ಷ ನಾಗಪ್ಪ ಕಲಗೋಡಿ ಭೇಟಿ ನೀಡಿ ಪರಿಶೀಲಿಸಿದರು.