ಜಿಲ್ಲೆ

ಬೆಂಕಿ ತಗುಲಿ ಗಿಡಗಳು ಭಸ್ಮ

ಹೊನ್ನಾವರ: ಪಟ್ಟಣದ ಚಂದ್ರಾಣಿ ಸಮೀಪದ ಶ್ರೀ ಹನುಮಂತ ದೇವಸ್ಥಾನದ ಮುಂಭಾಗದ ಅರಣ್ಯಕ್ಕೆ ಬೆಂಕಿ ತಗುಲಿ ಗಿಡಗಳು ಹಾಗೂ ಒಣಹುಲ್ಲು ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಭವಿಸಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದರು.