ಜಿಲ್ಲೆ

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟ: ಕೆ.ಪಿ.ರಾಧಾಕೃಷ್ಣನ್​ ಕರೆ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಾಗತಿಕ ಭಯೋತ್ಪಾದನೆಯನ್ನು ತೊಡೆದುಹಾಕಲು ಹಿಂದು ಸಮಾಜ ಒಗ್ಗೂಡಬೇಕಾದ ಸಮಯ ಸಮೀಪಿಸಿದೆ ಎಂದು ಆರೆಸ್ಸೆಸ್​ ಉತ್ತರ ಮತ್ತು ದಕ್ಷಿಣ ಪ್ರಾಂತ ಬೌದ್ಧಿಕ್​ ಪ್ರಮುಖ್​ ಕೆ.ಪಿ.ರಾಧಾಕೃಷ್ಣನ್​ ಹೇಳಿದರು.

ಬಾಂಗ್ಲಾದೇಶದ ಮತೀಯ ಅಲ್ಪಸಂಖ್ಯಾತರ ಐಕ್ಯತಾ ಸಮಿತಿ ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಬಾಂಗ್ಲಾದೇಶದ ಹಿಂದುಗಳಿಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿನ್ಮಯ ಮಿಷನ್​ ಕೇರಳ ಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮಿ, ಉಪ್ಪಳ ಕೊಂಡೆವೂರು ಆಶ್ರಮ ಸ್ವಾಮಿ ಯೋಗಾನಂದ ಸರಸ್ವತಿ, ಕಾಸರಗೋಡು ಮಾತಾ ಅಮೃತಾನಂದಮಯಿ ಮಠ ಸ್ವಾಮಿ ವೇದಾಮೃತ ಆಶೀರ್ವಚನ ನೀಡಿದರು.

ವಿಶ್ವ ಹಿಂದು ಪರಿಷತ್​ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಹಿಂದು ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್​ ಮುಳಿಯಾರ್​ ಸ್ವಾಗತಿಸಿದರು. ಐಕ್ಯತಾ ಸಮಿತಿಯ ಸಂಚಾಲಕ ಸುನೀಲ್​ ಕುದ್ರೆಪ್ಪಾಡಿ ವಂದಿಸಿದರು. ಕುಟುಂಬ ಪ್ರಬೋಧನ್​ ಅಖಿಲ ಭಾರತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯಭಟ್​, ಆರ್​ಎಸ್​ಎಸ್​ ಪ್ರಾಂತ ಕಾರ್ಯದರ್ಶಿ ಎ.ಸಿ.ಗೋಪಿನಾಥನ್​, ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್​, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್​, ಆರ್​ಎಸ್​ಎಸ್​ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್​ ಜೋತ್ಕಲ್​, ಕಾಸರಗೋಡು ಜಿಲ್ಲಾ ಸಂಚಾಲಕ್​ ಪ್ರಭಾಕರನ್​ ಮಾಸ್ಟರ್​, ಕಾಞಂಗಾಡ್​ ಜಿಲ್ಲಾ ಸಹಸಂಚಾಲಕ್​ ಪಿ.ಉಣ್ಣಿಕೃಷ್ಣನ್​, ಗಣೇಶ್​ ಅರಮಂಗಾನಂ, ಬಿಎಂಎಸ್​ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣನ್​, ೇತ್ರ ವಿಮಿತಿ ಸದಸ್ಯ ಅಪ್ಪಯ್ಯ ನಾಯಕ್​, ಜಿಲ್ಲಾಧ್ಯಕ್ಷ ನಾರಾಯಣನ್​ ಮಾಸ್ತರ್​, ಬ್ರಾಹ್ಮಣ ಪರಿಷತ್​ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಾಯಣ ಭಟ್​, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂದ ಅಧಿಕಾರಿ ಮುಕೇಶ್​ ಮೊದಲಾದವರು ಭಾಗವಹಿಸಿದ್ದರು.