ವಿಜಯಪುರ: ಬಬಲೇಶ್ವರ ತಾಲೂಕಿನ ಸುೇತ್ರ ಉಪ್ಪಲಗಿರಿ ಸಂಗಮನಾಥನ ಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು.ಜಾತ್ರೆ ಅಂಗವಾಗಿ ಅಂದು ಮಧ್ಯಾಹ್ನ ಶಿವಾಲಯ ಆವರಣದಲ್ಲಿ ನಡೆದ ಸಂಗಮೇಶ್ವರ ಪಲ್ಲಕ್ಕಿ, ನಂದಿಕೋಲ ಹಾಗೂ ಬೆಳ್ಳುಬ್ಬಿ ಗ್ರಾಮದ ಮಳೇಮಲ್ಲೆಶ್ವರ ನಂದಿಕೋಲ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದರ್ಶನ ಪಡೆದರು.
ಬಳಿಕ ಬೆಳ್ಳುಬ್ಬಿ ಗ್ರಾಮದ ನಂದಿಕೋಲ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಸಂಗಮೇಶ್ವರ ದೇವಾಲಕ್ಕೆ ಉತ್ಸವ ಬಂದು ತಲುಪಿದ ಮೇಲೆ ಸಂಗಮೇಶ್ವರ ಪೂಜೆ, ಮಂಗಳಾರತಿ ಜಾಂಕಟ್ಟಿ ಬಾರಿಸುವುದು ಹಾಗೂ ಮಹಾಪೂಜೆ ನೆರವೇರಿಸಲಾಯಿತು.ಇಂದು ಜಾತ್ರೆಯಲ್ಲಿ: ಆ. 23 ರಂದು ಬೆಳಗ್ಗೆ 10 ಗಂಟೆಗೆ ಸಮಸ್ತ ದೇವಾಲಯಗಳ ಕಲಶ ಇಳಿಸುವುದು ಹಾಗೂ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಜಂಗಿ ಕುಸ್ತಿ ಹಾಗೂ ದಿನನಿತ್ಯದ ರಾತ್ರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬಬಲೇಶ್ವರ ತಾಲೂಕಿನ ಸುೇತ್ರ ಉಪ್ಪಲಗಿರಿ ಸಂಗಮನಾಥನ ಜಾತ್ರೆಯಲ್ಲಿ ನಡೆದ ನಂದಿಕೋಲ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.