oplus_2 
ಜಿಲ್ಲೆ

ಸಂಭ್ರಮದ ಜಗದಂಬಾದೇವಿ ಮೂರ್ತಿ ಮೆರವಣಿಗೆ

ರಾಮದುರ್ಗ: ಪಟ್ಟಣದ ಯಾನಂ ಪೇಟೆಯ ಅಂಬಾಭವಾನಿ ದೇವಸ್ಥಾನದ ನೂತನ ಶ್ರೀ ಜಗದಂಬಾ ದೇವಿ ಮೂರ್ತಿ ಮೆರವಣಿಗೆ ಶನಿವಾರ ಜರುಗಿತು.

ಸುಮಂಗಲೆಯರ ಆರತಿ, ಡೊಳ್ಳು ಮೇಳ ಸೇರಿ ವಿವಿಧ ವಾದ್ಯದೊಂದಿಗೆ ಶ್ರೀ ಜಗದಂಬಾ ದೇವಿ ಮೂರ್ತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದ ಅಧ್ಯಕ್ಷ ಶಂಕರಸಾ ಹಬೀಬ, ಉಪಾಧ್ಯಕ್ಷ ಎಸ್.ಪಿ.ಮಲಜಿ, ಕಾರ್ಯದರ್ಶಿ ಮೋಹನಸಾ ಮಲಜಿ, ಅಶೋಕಸಾ ಮಲಜಿ, ಅರ್ಜುನಸಾ ನಾಯಕವಾಡ, ಟ್ರಸ್ಟ್ ಕಮಿಟಿ ಅಧ್ಯಕ್ಷ ಅಂಬಾಲಾಲಸಾ ಮಲಜಿ, ಉಪಾಧ್ಯಕ್ಷ ಪ್ರಕಾಶ ದಾನಿ, ಕಾರ್ಯದರ್ಶಿ ರಮೇಶ ನಾಯಕವಾಡ, ತರುಣ ಮಿತ್ರ ಮಂಡಳಿ ಅಧ್ಯಕ್ಷ ವಿಷ್ಣು ನಿರಂಜನ, ಉಪಾಧ್ಯಕ್ಷ ಸಂಜು ಪವಾರ, ಮಹಿಳಾ ಮಂಡಳದ ಅಧ್ಯಕ್ಷೆ ವಿದ್ಯಾ ನಾಯಕವಾಡ, ಉಪಾಧ್ಯಕ್ಷೆ ರೇಷ್ಮಾ ಮಲಜಿ, ಮೇಘಾ ಮಲಜಿ ಇತರರಿದ್ದರು.