ನಾಪೋಕ್ಲು: ಇಲ್ಲಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಹುತ್ತರಿ ವೆಳ್ಳಾಟ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಹುತ್ತರಿ ವೆಳ್ಳಾಟ ಪ್ರಯುಕ್ತ ಡಿ.15 ರಂದು ಸಂಜೆ ಕೇರಳದ ಪ್ರಖ್ಯಾತ ಮಡೆಯನ್ ಅವರಿಂದ ನೃತ್ಯದ ಮೂಲಕ ದೇವರ ಮಲೆ ಇಳಿಸಲಾಯಿತು. ಆನಂತರ ಪೊನ್ನು ಮುತ್ತಪ್ಪ ದೇವರ ವೆಳ್ಳಾಟ ನಡೆಯಿತು. ಬಳಿಕ ಗುಳಿಗ, ಕುಟ್ಟಿಚಾತ ದೇವರ ವೆಲ್ಲಾಟ ವಿಧಿ ವಿಧಾನಗಳೊಂದಿಗೆ ಜರುಗಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ ಸೇವೆಗಳನ್ನು ಒಪ್ಪಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.
ಪೊನ್ನುಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ.ಚಂದ್ರನ್, ಕಾರ್ಯದರ್ಶಿ ರಾಜೀವ, ಸಮಿತಿ ಸದಸ್ಯರಾದ ಶ್ರೀಧರ್, ವಿಜಯ್, ದೇವಾಲಯದ ಪೂಜಾರಿ ಹರಿದಾಸ್, ಸಮಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.