ದೇವನಹಳ್ಳಿ: ಇತಿಹಾಸ ಪ್ರಸಿದ್ಧ ದೇವನಹಳ್ಳಿಯ ಮೌಕ್ತಿಕಾಂಬಾ ಅಮ್ಮನವರ ಕರಗ ಶಕ್ತೊ$್ಯತ್ಸವ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದಲ್ಲಿ 9 ದಿನಗಳ ಕಾಲ ಕಠಿಣ ವ್ರತದಲ್ಲಿದ್ದ ಪೂಜಾರಿ ಅಕ್ಕೂಪೇಟೆ ಉಮೇಶ್ ಮೊದಲ ಬಾರಿ ಸಿವೇಷ ತೊಟ್ಟು ಶಾಸೊಕ್ತವಾಗಿ ಪೂಜೆ ಸಲ್ಲಿಸಿದರು.
ಮಂಗಳವಾರ ಬೆಳಗಿನ ಜಾವ 2ಕ್ಕೆ ಮೌಕ್ತಿಕಾಂಬಾ ದೇವಿಯ ಕರಗ ಹೊತ್ತು ದೇವಾಲಯದಿಂದ ಹೊರ ಬಂದು ಪುಟ್ಟಪ್ಪನ ಗುಡಿಬೀದಿಯ ಕರಗ ಮಂಟಪ ಹಾಗೂ ಏಳುಸುತ್ತಿನ ಕೋಟೆ ಕಡೆ ಹೆಜ್ಜೆಹಾಕಿದರು. 650ಕ್ಕೂ ಹೆಚ್ಚು ವೀರಕುಮಾರರು, ಗಂಟೆ ಪೂಜಾರಿಗಳು, ಗೌಡರು, ಗಣಾಚಾರಿಗಳು ಹಾಗೂ ದಾಸಯ್ಯನ ಕಹಳೆ ನಾದದೊಂದಿಗೆ ಗೋವಿಂದ ನಾಮಸ್ಮರಣೆ ಮಾಡುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ನಂತರ ದೇವಾಲಯದ ಸುತ್ತ ಪ್ರದಣೆ ಹಾಕುವಾಗ ಗಂಟೆ ಪೂಜಾರಿಗಳ ಹಾಡು ಹಾಗೂ ನಾದಕ್ಕೆ ತಕ್ಕಂತೆ ನೃತ್ಯ ಮಾಡಿದ್ದು ಆಕರ್ಷಣೀಯವಾಗಿತ್ತು.
ಮರಳುಬಾಗಿಲಿನ ಪರ್ವತಪುರ ರಸ್ತೆಯಲ್ಲಿ ಪುರಸಭಾ ಮಾಜಿ ಸದಸ್ಯ ವಿ.ಗೋಪಾಲ್ ಮತ್ತು ವೆಂಕಟರಾಯಪ್ಪ ಕುಟುಂಬದವರು ಒಂದು ಸಾವಿರ ಕೆಜಿ ಬಿಡಿ ಹೂಗಳಿಂದ ವೃತ್ತದಲ್ಲಿ ಬಿಡಿಸಿದ್ದ ಹೂವಿನ ಚಿತ್ತಾರ, ಸರೋವರ ಬೀದಿಯಲ್ಲಿ 15ನೇ ವಾರ್ಡ್ನಲ್ಲಿ, 14ನೇ ವಾರ್ಡ್ನ ಪುನೀತ್ ರಾಜಕುಮಾರ್ ಪುತ್ಥಳಿ ಬಳಿ ದಾಸರಬೀದಿಯಲ್ಲಿ ಹಲವು ಕಡೆ ಸಾವಿರಾರು ಕೆಜಿ ಹೂವಿನ ಹಾಸಿನ ಮೇಲೆ ಕರಗದ ನೃತ್ಯದ ಹಲವು ಭಂಗಿಗಳು ಭಕ್ತರನ್ನು ಆಕರ್ಷಿಸಿತು. ರಾತ್ರಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಹಾಗೂ ನಾಲ್ಕಾರು ಕಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಂಗಳವಾರ ಸಂಜೆ ವಸಂತೋತ್ಸವ ನಡೆದಿದ್ದು, 14ರ ರಾತ್ರಿ 8 ಗಂಟೆಗೆ ಪಣಸ್ಥರ ಪೂಜೆಯೊಂದಿಗೆ ಕರಗ ಮಹೋತ್ಸವ ಸಂಪನ್ನಗೊಳ್ಳಲಿದೆ.
ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಮಲ ನಟರಾಜ್, ಸದಸ್ಯರು, ಮುಖ್ಯಾಧಿಕಾರಿ ಸಿ.ದೊಡ್ಡಮಲವಯ್ಯ, ಸಿಬ್ಬಂದಿ, ತಿಗಳರ ಸಂದ ತಾಲೂಕಾಧ್ಯಕ್ಷ ವಿ.ಗೋಪಾಲಕೃಷ್ಣ ಮತ್ತು ಪದಾಧಿಕಾರಿಗಳು, ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ವಿಜಯಕುಮಾರ್, ಗಣಾಚಾರಿ ಗೋಪಾಲಪ್ಪ, ಗೌರವಾಧ್ಯಕ್ಷ ಚನ್ನರಾಯಪ್ಪ, ಪುರಸಭಾ ಸದಸ್ಯ ಎಸ್.ಸಿ ಚಂದ್ರಪ್ಪ, ಮಾಜಿ ಸದಸ್ಯ ಶಶಿಕುಮಾರ್, ವೈ.ಎನ್.ಶಾಮಣ್ಣ, ಪೂಜಾರಿ ರವಿಕುಮಾರ್, ನಾಗರಾಜಪ್ಪ ಗೀತಾರಾಣಿ, ಅಶ್ವತ್ಥಪ್ಪ, ಗಜೇಂದ್ರ , ಜಿ.ಮುನಿರಾಜು ಸೇರಿ ಎಲ್ಲ ನಿರ್ದೇಶಕರು, ವೀರಕುಮಾರರು ಇದ್ದರು.
ಕರಗದ ವಿಶೇಷತೆ
ಭಕ್ತರು ಹಣ್ಣು ಕಾಯಿ, ಹೂವು ಸಮೇತ ಕರ್ಪೂರದ ಆರತಿ ಬೆಳಗಿ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿ ಕರಗದ ಮೇಲೆ ಮಲ್ಲಿಗೆ ಹೂವು ಚೆಲ್ಲಿದರು. ಕೋಟೆಯ ಚಿಕ್ಕಕೆರೆಯ ಬಳಿಯ ದರ್ಗಾ, ತಾಲೂಕು ಕಚೇರಿ ರಸ್ತೆಯ ಮಸೀದಿ ಬಳಿಗೆ ತೆರಳಿದಾಗ ಮುಸ್ಲಿಮರು ಕರಗವನ್ನು ಪೂಜಿಸಿ ಮಲ್ಲಿಗೆ ಹೂವು ಎರಚಿ ಕಲ್ಲುಸಕ್ಕರೆ, ರ್ಖಜೂರ ಹಂಚಿದರು.
ತಾಲೂಕು ಕಚೇರಿ ರಸ್ತೆಯ ಸರ್ವಶಕ್ತಾ$್ಯತ್ಮಕೆ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಒಳಗೆ ಪ್ರವೇಶಿಸಿದ ಕರಗ ಗರ್ಭಗುಡಿಯ ಪ್ರದಣೆ ಹಾಕಿತು.
ಶ್ರೀ ಚೌಡೇಶ್ವರಿಗೆ ವಿಶೇಷ ಅಲಂಕಾರ
ದೇವನಹಳ್ಳಿಯ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿರುವ ಸರ್ವಶಕ್ತಾ$್ಯತ್ಮಕೆ ಶ್ರೀ ಚೌಡೇಶ್ವರಿ ದೇವಿಗೆ ಮೌಕ್ತಿಕಾಂಭ ಅಮ್ಮನವರ ಕರಗದ ಮಹೋತ್ಸವದ ಪ್ರಯುಕ್ತ ವಿಶೇಷ ಕರಗದ ಅಲಂಕಾರ ಮಾಡಲಾಗಿತ್ತು.