ಜಿಲ್ಲೆ

ಜಕ್ಕಲಿ ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಜಾತ್ರೆ

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಹುಚ್ಚಯ್ಯ ತೇರು ಆ.26ರಂದು ಜರುಗಲಿದೆ. ಬೆಳಗ್ಗೆ 6 ಗಂಟೆಗೆ ಕಲ್ಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

ಮಧ್ಯಾಹ್ನ 3 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 5-30ಕ್ಕೆ ಹುಚ್ಚಯ್ಯ ತೇರು ಉತ್ಸವವು ಡೊಳ್ಳು, ಮಜಲು ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನದಿಂದ ಗ್ರಾಮದ ಸಂಗಮೇಶ್ವರ ದೇವಸ್ಥಾನ, ಹನಮಂತದೇವರ ಗುಡಿ, ಗ್ರಾಮ ಚಾವಡಿ, ವೀರಭದ್ರೇಶ್ವರ ದೇವಸ್ಥಾನದ ಮೂಲಕ ಬಸ್ ನಿಲ್ದಾಣದ ಸಮೀಪದ ಅಗಸಿ ಬಾಗಿಲವರೆಗೆ ಸಂಚರಿಸಿ ಬಳಿಕ ಮರಳಿ ದೇವಸ್ಥಾನ ತಲುಪಲಿದೆ.