ಮಾಜಿ ಸಚಿವ ಕುಮಾರ್ ಬಂಗಾರಪ್ಪ  
ಜಿಲ್ಲೆ

ಸೊರಬದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ಉಚ್ಛಾಟನೆ ಕ್ರಮ ಸರಿಯಲ್ಲ

ಶಿವಮೊಗ್ಗ: ಸೊರಬ ತಾಲೂಕಿನಲ್ಲಿ ಐವರು ಬಿಜೆಪಿ ಕಾರ್ಯಕರ್ತರನ್ನು ಉಚ್ಚಾಟಿಸಿರುವ ಕ್ರಮ ಸರಿಯಲ್ಲ. ಇದನ್ನ ಜಿಲ್ಲಾಧ್ಯಕ್ಷರ ಮತ್ತು ರಾಜ್ಯ ಕಮಿಟಿಯ ಗಮನಕ್ಕೂ ತಂದಿರುವೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕಾಗೋಷ್ಟಿ ಮಾಡಿದ್ದಕ್ಕೆ ಉಚ್ಚಾಟನೆ ಮಾಡಿದ್ದು ಜಿಲ್ಲಾಧ್ಯಕ್ಷರಿಗೆ ಮತ್ತು ರಾಜ್ಯಾಧ್ಯಕ್ಷರಿಗೂ ಹೇಳಿದ್ದೇನೆ. ಸಂಘಟನೆ ಬಲವರ್ಧನೆಗೊಳ್ಳುವ ಸಂದರ್ಭದಲ್ಲಿ ಉಚ್ಚಾಟನೆ ಸರಿಯಲ್ಲವೆಂಬುದನ್ನ ಸಂಘಟನೆಗಾಗಿ ಬಂದಿದ್ದ ಬಿಜೆಪಿ ತರುಣ್‌ಸಿಂಗ್ ಬಳಿಯೂ ತಿಳಿಸಿರುವೆ. ಉಚ್ಚಾಟಿತರಾದವರ ಪ್ರಾಥಮಿಕ ಸದಸ್ಯತ್ವ ಮುಂದುವರಿಸುವಂತೆ ಕೋರಲಾಗಿದೆ ಎಂದರು.