ಕಲಾದಗಿಯಲ್ಲಿ ಗನಸೆಳೆದ ಗಡ್ಡಿಓಣಿಯ ಯುವಕರು ಮಾಡಿದ್ದ ಸೋಗಿನ ಬಂಡಿ  
ಜಿಲ್ಲೆ

ಕಲಾದಗಿಯಲ್ಲಿ ಕಾಮದಹನದ ಸಂಭ್ರಮೊಲ್ಲಾಸ

ಕಲಾದಗಿ: ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಹೊಸೂರ ಚೌಕ, ಬಸವಣ್ಣ ದೇವರ ಓಣಿ, ಅಂಬೇಡ್ಕರ ಸರ್ಕಲ್, ಹರಿಜನ ಕೇರಿ, ಗಡ್ಡಿಓಣಿ, ಭಾಗವಾನರ ಓಣಿ ಮುಂತಾದ ಕಡೆಗಳಲ್ಲಿ ಕಳೆದ ಹದಿನೈದುದಿನಗಳಿಂದ ಸಂಗ್ರಹಿಸಿದ್ದ ಕಟ್ಟಿಗೆಗಳಿಗೆ ಬೆಂಕಿ ಹೊತ್ತಿಸುವ ಮೂಲಕ ಕಾಮದಹನ ಸಂಭ್ರಮೊಲ್ಲಾಸಗಳಿಂದ ಜರುಗಿತು.

ಯುವಕರು,ಮಕ್ಕಳು ಸಂಭ್ರಮೊಲ್ಲಾಸಗಳಿಂದ ಹಲಗೆಯನ್ನು ಬಾರಿಸುತ್ತಾ ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಾ ಸಡಗರ ಪಟ್ಟರು. ಗ್ರಾಮದ ಗಡ್ಡಿ ಓಣಿಯ ಯುವಕರು ಮಾಡಿದ್ದ ಸೋಗಿನ ಬಂಡಿ ಊರವರವನ್ನು ನಗಿಸುವಲ್ಲಿ ಯಶಸ್ವಿಯಾಯಿತು.

ಕಾಮದಹನದ ನಂತರ ಮಹಿಳೆಯರು ಕೆಂಡದಲ್ಲಿ ಸಂಪ್ರದಾಯದಂತೆ ಕಡಲೆ, ಕುಂಬಳ ಕಾಯಿ, ತೆಂಗಿನಕಾಯಿ ಸುಟ್ಟು ಎಲ್ಲರಿಗೂ ಹಂಚಿ ಸಂತಸ ಪಟ್ಟರು. ಮಾ.16ರಂದು ಗ್ರಾಮದಲ್ಲಿ ಬಣ್ಣದೋಕುಳಿ ನಡೆಯಲಿದೆ.