ಬ್ರಹ್ಮಾವರ: ಆಟಿ ತಿಂಗಳಲ್ಲಿ ನಿಸರ್ಗದತ್ತವಾಗಿ ಬೆಳೆಯುವ ಪರಂಪರಾಗತ ಸೊಪ್ಪು ತರಕಾರಿ ಸೇರಿದಂತೆ ನಾನಾ ಖಾದ್ಯಗಳನ್ನು ಮರೆಯುತ್ತಿರುವ ಇಂದಿನ ಕಾಲಟ್ಟದಲ್ಲಿ ಮತ್ತೆ ನೆನಪಿಸುವ ಕಾರ್ಯವೇ ಆಟಿಡೊಂಜಿ ದಿನ ಕಾರ್ಯಕ್ರಮ ಎಂದು ಬಿಲ್ಲವ ಸವಾಜಸೇವಾ ಸಂ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಹೇಳಿದರು.
ಬ್ರಹ್ಮಾವರ ಬಿಲ್ಲವ ಸವಾಜ ಸೇವಾ ಸಂದ ನಾರಾಯಣ ಗುರು ಮಂದಿರದಲ್ಲಿ ಭಾನುವಾರ ಮಹಿಳಾ ಸಂದಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಹ್ಮಾವರ ಪರಿಸರದ ಹಂದಾಡಿ, ಮಟಪಾಡಿ, ನೀಲಾವರ, ಬೈಕಾಡಿ, ಹಾರಾಡಿ, ಉಪ್ಪಿನಕೋಟೆ, ವಾರಂಬಳ್ಳಿ ಸೇರಿದಂತೆ ಸಂದ ನಾನಾ ಭಾಗದ ಮಹಿಳೆಯರು ಆಟಿ ತಿಂಗಳ ತಿನಿಸುಗಳು ಸೇರಿದಂತೆ 26 ಬಗೆಯ ತಿನಿಸುಗಳನ್ನು ವಾಡಿ ತಂದಿದ್ದರು. ಮಹಿಳೆಯರು ಮತ್ತು ಮಕ್ಕಳಿಗೆ ನಾನಾ ಸ್ಪರ್ಧೆ ನಡೆಯಿತು.
ಪ್ರಮುಖರಾದ ಶೇಖರ ಕೋಟ್ಯಾನ್, ಮೋಹನ ಪೂಜಾರಿ ಹಂದಾಡಿ, ರಾು ಪೂಜಾರಿ ನರಸಿಂಹ ಪೂಜಾರಿ, ಅಶೋಕ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ಶಂಕರ ಪೂಜಾರಿ ಉಮೇಶ್ ಪೂಜಾರಿ, ಅಶೋಕ್ ಹೇರೂರು, ಬಾಲಕೃಷ್ಣ ಹಾರಾಡಿ, ಶೋಭಾ ಪೂಜಾರಿ, ವಸಂತಿ ಪೂಜಾರಿ, ಹೇವಾ ಪೂಜಾರಿ, ಶೈಲಾ ಹೇರೂರು ಉಪಸ್ಥಿತರಿದ್ದರು.