ಕುಕನೂರಿನ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ನ ಸಭೆಯಲ್ಲಿ ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮಾತನಾಡಿದರು. ಶಿಕ್ಷಣ ಸಂಯೋಜಕ, ಸಾಹಿತಿ ಶರಣಪ್ಪ ರಾವಣಕಿ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಈರಯ್ಯ ಕುರ್ತಕೋಟಿ, ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ನಿಂಗಪ್ಪ ತಟ್ಟಿ, ಶಿಕ್ಷಕ ಬಸವರಾಜ ಉಪ್ಪಿನ್ ಇತರರಿದ್ದರು. 
ಜಿಲ್ಲೆ

ಜೀವನದ ಸಾರ ವಚನಗಳಲ್ಲಿ ಕಾಣಬಹುದು

ಕುಕನೂರು: ಮಕ್ಕಳಲ್ಲಿ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಪಠ್ಯದಲ್ಲಿ ವಚನ ಸಾಹಿತ್ಯ ಅಳವಡಿಸಬೇಕು ಎಂದು ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಸಭೆಯಲ್ಲಿ ಮಾತನಾಡಿದರು. ವಚನ ಸಾಹಿತ್ಯ ವಿಶ್ವ ಬ್ರಾತೃತ್ವದ ದಿವ್ಯ ಸಾಹಿತ್ಯವಾಗಿದೆ. ವಚನಗಳನ್ನು ಸರ್ವರಿಗೂ ತಿಳಿಸಲು ವಚನ ಪರಿಷತ್ ಮುಂದಿನ ದಿನಗಳಲ್ಲಿ ಶಾಲೆಗೊಂದು ಕಾರ್ಯಕ್ರಮ ಆಯೋಜಿಸಬೇಕು. ಜೀವನದ ಸಾರವನ್ನು ಶರಣರ ವಚನಗಳಲ್ಲಿ ಕಾಣಬಹುದು. ಮೆಕಾಲೆ ಅವರ ಇಂಗ್ಲಿಷ್ ಶಿಕ್ಷಣ ಪದ್ಧತಿ ದೇಶದಲ್ಲಿ ವ್ಯಾಪಿಸಿದಂತೆ ಯುವಕರಿಗೆ ವಚನಗಳ ಕುರಿತು ತಿಳಿಸು ಕಾರ್ಯವನ್ನು ಪರಿಷತ್ ಮಾಡಬೇಕಿದೆ ಎಂದರು.

ಸಾಹಿತಿ ಶರಣಪ್ಪ ರಾವಣಕಿ ಮಾತನಾಡಿ, ಪ್ರತಿ ಗ್ರಂಥಾಲಯದಲ್ಲಿ ವಚನ ಪುಸ್ತಕಗಳು ಹೆಚ್ಚಾಗಿ ಲಭ್ಯವಾಗಬೇಕು. ಯುವ ಪೀಳಿಗೆಗೆ ವಚನಗಳ ಬಗ್ಗೆ ಅರಿವು ಮೂಡಿಸಲು ಪರಿಷತ್‌ನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಪರಿಷತ್ ತಾಲೂಕು ಅಧ್ಯಕ್ಷ ಈರಯ್ಯ ಕುರ್ತಕೋಟಿ, ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ನಿಂಗಪ್ಪ ತಟ್ಟಿ, ಶಿಕ್ಷಕ ಬಸವರಾಜ ಉಪ್ಪಿನ್, ಪ್ರಮುಖರಾದ ಪೀರ್‌ಸಾಬ್ ದಫೆದಾರ್, ಉಮೇಶ ಕಂಬಳಿ, ಶಂಭು ಅರಿಶಿನದ, ಚಂದ್ರು ದೊಡ್ಡಮನಿ, ತಿಪ್ಪಣ್ಣ ಹೊಸಮನಿ, ಅಡಿವೆಪ್ಪ ಬೋರಣ್ಣವರ ಇತರರಿದ್ದರು.