The epitome of simple gentlemanliness 
ಜಿಲ್ಲೆ

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ

Vijayapura - Desk - Doddanagouda Gudihindin

ಲೋಕಾಪುರ: ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ. ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ ಎಂದು ಬಿಜೆಎಚ್‌ಎಸ್ ಮುಖ್ಯಶಿಕ್ಷಕ ಎಸ್.ಬಿ.ಪಾಟೀಲ ಹೇಳಿದರು.

ಪಟ್ಟಣದ ಬಿವಿವಿಎಸ್ ಮಹಿಳಾ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿದ ಅವರು, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಆಗಿದ್ದ ಬಾಬು ಜಗಜೀವನರಾಮ್ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಎಸ್.ಎಂ. ಹುದ್ದಾರ, ಆರ್.ವಿ. ಮುತಾಲಿಕ್ ದೇಸಾಯಿ, ಜಿ.ಎಸ್.ಹಡಪದ, ಎಂ.ಟಿ. ಚೌಧರಿ, ಎಸ್.ಎಸ್.ಗೌಡರ, ಸಿ.ಎಂ. ಪೂಜಾರ, ಜೆ.ವಿ. ಗಾಳಿಪೂಜಿಮಠ, ಎ.ಜಿ. ಗಣಾಚಾರಿ, ಶಂಕರ ಮುದ್ದಾಪುರ, ನಿಂಗಪ್ಪ ದುಂಡಪ್ಪಗೋಳ, ಮಹಾದೇವ ದುಂಡಪ್ಪಗೊಳ ಇದ್ದರು.