ಹನೂರು: ತಾಲೂಕಿನ ತಾಳುಬೆಟ್ಟ ಮಲೆಮಹದೇಶ್ವರ ಬೆಟ್ಟದ ಮಾರ್ಗ ಮಧ್ಯದ ಹಳ್ಳವೊಂದರ ಬಳಿ ಶನಿವಾರ ಆಗಮಿಸಿದ್ದ ಕಾಡಾನೆಯೊಂದು ಭಕ್ತರ ಗುಂಪನ್ನು ಕಂಡು ಕಾಡಿನತ್ತ ಓಟ ಕಿತ್ತಿದ್ದು, ಇದರ ವಿಡಿಯೋವನ್ನು ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ವಲಯಕ್ಕೆ ಸೇರಿದ್ದು, ಬೆಳಗ್ಗೆ ಸುಮಾರು 10ರ ವೇಳೆಯಲ್ಲಿ ಕಾಡಾನೆಯೊಂದು ರಸ್ತೆ ಸಮೀಪದ ಹಳ್ಳದತ್ತ ಬಂದಿತ್ತು. ಈ ವೇಳೆ ಮ.ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಗುಂಪು ಆನೆಯ ಚಲನವಲನವನ್ನು ವೀಕ್ಷಿಸುತ್ತಾ ವಿಡಿಯೋ ಮಾಡಲು ಮುಂದಾಗಿದ್ದಾರೆ. ಜನರ ಶಬ್ದ ಕೇಳಿದ ಆನೆ ಗಾಬರಿಗೊಂಡು ರಭಸದಿಂದ ಕಾಡಿನತ್ತ ಓಟಕಿತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.