The Eightfold Path of Donation and Puja Festival 
ಜಿಲ್ಲೆ

ಅಷ್ಠ ಪರಿಷ್ಕಾರ ದಾನ ಪುಣ್ಯ ಪೂಜಾ ಮಹೋತ್ಸವ

ವಿಜಯಪುರ : ಜಿಲ್ಲೆಯ ಎಲ್ಲ ಉಪಾಸಕ ಮತ್ತು ಉಪಾಸಕಿಯರ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅ. ೨೬ರಂದು ಬೆಳಗ್ಗೆ ೧೦ ಗಂಟೆಗೆ ವರ್ಷಾವಾಸ ಮುಕ್ತಾಯ ನಿಮಿತ್ತ ಅಷ್ಠ ಪರಿಷ್ಕಾರ ದಾನ ಪುಣ್ಯ ಪೂಜಾ ಮಹೋತ್ಸವ ಮತ್ತು ಧಮ್ಮ ದೇಸನ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ಬೌದ್ಧ ಮಹಾಸಭಾ ರಾಷ್ಟಿçÃಯ ಕಾರ್ಯಾಧ್ಯಕ್ಷ ಡಾ. ಭೀಮರಾವ್ ವೈ. ಅಂಬೇಡ್ಕರ್ ಆಜ್ಞಾನುಸಾರ ಪವಿತ್ರ ವರ್ಷಾವಾಸ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೦ ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ, ೧೦.೩೦ ರಿಂದ ೧೧.೩೦ರವರೆಗೆ ಬುದ್ಧ ವಂದನೆ ಮತ್ತು ಸಂಘ ದಾನ, ಬೆಳಗ್ಗೆ ೧೧.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ಭೋಜನ ದಾನ ಹಾಗೂ ಮಧ್ಯಾಹ್ನ ೧೨.೩೦ ರಿಂದ ಪೂಜ್ಯ ಬಿಕ್ಕು ಸಂಘದಿAದ ಧಮ್ಮ ಪ್ರವಚನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಲಂಕಾದ ಪೂಜ್ಯ ಭಂತೇ ಸಂಘಾನAದ ಮಹಾ ಥೇರೋ, ಮೈಸೂರು ಅಷ್ಟಾಂಗ ಮಾರ್ಗ ಧ್ಯಾನ ಕೇಂದ್ರದ ಪೂಜ್ಯ ಭಂತೇ ಭೋದಿದತ್ತ ಥೇರೋ ಹಾಗೂ ಶ್ರೀಲಂಕಾ ಧಮ್ಮ ವಿಜಯಪುರ ಬುದ್ಧವಿಹಾರದ ಪೂಜ್ಯ ಭಂತೇ ಚಂದರತ್ನ ಥೇರೋ ಭಾಗವಹಿಸಲಿದ್ದಾರೆ ಎಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಆಯುಷ್ಮಾನ ವೆಂಕಟೇಶ ವಗ್ಯಾನವರ ತಿಳಿಸಿದ್ದಾರೆ.