ಜಿಲ್ಲೆ

ಸಂಸ್ಕಾರ ವೃದ್ಧಿಗೆ ಮಠಗಳ ಶ್ರಮ

ಮುರಗೋಡ: ಸಮಾಜದಲ್ಲಿ ಧರ್ಮ ಜಾಗೃತಿ ಕಾರ್ಯದ ಜತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಮಠ-ಮಾನ್ಯಗಳು ಪಾತ್ರ ಪ್ರಮುಖವಾಗಿದೆ. ಹಿಂದು ಧರ್ಮದ ಏಳಿಗೆಗೆ ದೇಶಾದ್ಯಂತ ಹನುಮ ಜಯಂತಿ ಆಚರಿಸುತ್ತಿರುವುದು ಸಂತಸವಾಗಿದೆ ಎಂದು ಉದ್ಯಮಿ ವಿಜಯ ಮೆಟಗುಡ್ಡ ಹೇಳಿದರು.

ಸಮೀಪದ ಹಲಕಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಹನುಮಂತ ದೇವರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರೇಮಠ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶ್ರದ್ಧಾ, ಭಕ್ತಿಯಿಂದ ಶ್ರೀರಾಮ ಭಕ್ತ ಹನುಮಂತನನ್ನು ಆರಾಧಿಸುವ ಜತೆಗೆ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅನಗವಾಡದ ಅನಸೂಯಾ ತಾಯಿ, ನಾಗನೂರಿನ ಪಾರಮ್ಮ ತಾಯಿ, ಮುದ್ದಮ್ಮತಾಯಿ, ತಾಪಂ ಮಾಜಿ ಸದಸ್ಯ ಸುರೇಶ ಮ್ಯಾಕಲ, ಪತ್ರಯ್ಯಸ್ವಾಮಿ ಹಿರೇಮಠ, ವಿರೂಪಾಕ್ಷ ಗೌಡರ, ಅಜ್ಜಪ್ಪ ಹುಬ್ಬಳ್ಳಿ ಇತರರಿದ್ದರು. ಎಂ.ಕೆ.ಬೈಲವಾಡ ನಿರೂಪಿಸಿದರು.