ಮಂಗಳೂರು: ಮೇರಿಹಿಲ್ ಐಟಿ ಕಂಪನಿಯೊಂದರ ಚಾಲಕನ ಮೇಲೆ ತಂಡವೊಂದು ಹಲ್ಲೆಗೈದ ಪ್ರಕರಣದಲ್ಲಿ ನಾಲ್ವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ಹಲ್ಲೆಗೊಳಗಾದವರು. ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ, ದೀಕ್ಷಿತ್ ದೇವಾಡಿಗ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ ಬಾಕಿಯಿದೆ.
ತೇಜಸ್ ಕೂಡಾ ಅದೇ ಸಂಸ್ಥೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಈತನಿಗೂ ಹಲ್ಲೆಗೊಳಗಾದ ಸಂದೀಪ್‌ಗೂ ವೈಷಮ್ಯವಿತ್ತು. ಬುಧವಾರ ತೇಜಸ್ ತನ್ನ ಪಾಳಿ ಮುಗಿದ ಬಳಿಕ ತನ್ನ ಸಹೋದರರು ಮತ್ತು ಇತರ ನಾಲ್ವರ ಜತೆಗೆ ಬಂದು ಮಾರಕಾಯುಧದಿಂದ ಹಲ್ಲೆಗೈದಿದ್ದಾರೆ. ಗಾಯಗೊಂಡ ಸಂದೀಪ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.