ಮದ್ದೂರು: ತಾಲೂಕಿನ ರುದ್ರಾಕ್ಷಿಪುರ ಗ್ರಾಮದ ಬಳಿ ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್ ವೇನಲ್ಲಿ ಟೆಂಪೋ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ, ರಾಮದುರ್ಗ ತಾಲೂಕಿನ, ಮುಳ್ಳೂರು ಗ್ರಾಮದ ಸಿದ್ದಪ್ಪ ಜಿ.ನವಲಗುಂದ(61) ಮೃತರು. ಇವರು ಮಂಡ್ಯದಿಂದ ಜನರೇಟರ್ ಇರುವ ಟೆಂಪೋವನ್ನು ಬೆಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಶನಿವಾರ ಸಂಜೆ ರುದ್ರಾಕ್ಷಿಪುರದ ಬಳಿ ಮುಂದೆ ಸಾಗುತ್ತಿದ್ದ ವಾಹನ ಸ್ಲೋ ಮಾಡಿದೆ. ಈ ವೇಳೆ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಗೆ ಬಂದು ಪಲ್ಟಿಯಾಗಿದೆ.ಪರಿಣಾಮ ಚಾಲಕ ಸಿದ್ದಪ್ಪ ಜಿ.ನವಲಗುಂದ ವಾಹನದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.