ಜಿಲ್ಲೆ

ಅಖಂಡ ಭಾರತ ಕನಸು ನನಸು ಸನಿಹ

ಕೋಟ: ಅಖಂಡ ಭಾರತಕ್ಕಾಗಿ ಹಿಂದು ಸವಾಜ ನಿರಂತರ ಹೋರಾಟ ನಡೆಸುತ್ತಿದೆ. ಅದರ ಫಲವಾಗಿ ಇಂದು ಅದರ ಕನಸು ಸಾಕಾರಗೊಳ್ಳುವ ದಿನಗಳು ಸಮೀಪಿಸಿದೆ ಎಂದು ಹಿಂದು ಮುಖಂಡ ಕಲ್ಲಡ್ಕ ರಾಧಕೃಷ್ಣ ಅಡ್ಯಂತಾಯ ಅಭಿಪ್ರಾಯಪಟ್ಟರು.

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೋಟ ಹಿಂದು ಜಾಗರಣಾ ವೇದಿಕೆ ಕೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿ ವೆಂಕಟೇಶ ದೇವರಾಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಪಂಜಿಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಹಿಂದು ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಶ್ರೀನಿಧಿ ಆಚಾರ್ ಬಾರ್ಕೂರು, ಕೋಟ ಟಕ ಅಧ್ಯಕ್ಷ ಪವನ್ ಕುಂದರ್, ಗೌರವಾಧ್ಯಕ್ಷ ಆನಂದ ದೇವಾಡಿಗ ಉಪಸ್ಥಿತರಿದ್ದರು. ಸಂಟನೆಯ ಕೋಶಾಧಿಕಾರಿ ಜ್ಞಾನೇಶ್ ಆಚಾರ್ ಪ್ರತಿಜ್ಞಾ ಭೋದಿಸಿದರು. ಮಂಜುನಾಥ್ ಆಚಾರ್ ಸ್ವಾಗತಿಸಿ, ವಂದಿಸಿದರು.