ಬಾದಾಮಿಯ ವೀರಪುಲಿಕೇಶಿ ವಿದ್ಯಾಸಂಸ್ಥೆ ಬಸವ ಮಂಟಪದಲ್ಲಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶಿಷ್ಯೋಪನಯನ ಸಮಾರಂಭವನ್ನು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕಾಲೇಜಿನ ಚೇರ್ಮನ್ ಮಹಾಂತೇಶ ಮಮದಾಪೂರ, ಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಇತರರಿದ್ದರು. 
ಜಿಲ್ಲೆ

ವೈದ್ಯರು ರೋಗಿಯ ಪಾಲಿನ ದೇವರು

ಬಾದಾಮಿ: ವೈದ್ಯರು ಆಯುರ್ವೇದ ಪದ್ಧತಿಯನ್ನು ಉನ್ನತಮಟ್ಟಕ್ಕೇರಿಸಬೇಕೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ವೀರಪುಲಿಕೇಶಿ ವಿದ್ಯಾಸಂಸ್ಥೆಯ ಗ್ರಾಮೀಣ ಆಯುರ್ವೇದ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ 2025ರ ಶಿಷ್ಯೋಪನಯನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ, ಇಮ್ಮಡಿ ಪುಲಿಕೇಶಿ ನಾಡಿನಲ್ಲಿ ನೀವು ವೈದ್ಯರಾಗಿ ಹೊರಹೊಮ್ಮಿದ್ದು, ಪಾಲಕರ ಜತೆಗೆ ನಮಗೂ ಹೆಮ್ಮೆ ತಂದಿದೆ. ವೈದ್ಯರಾದ ನೀವು ರೋಗಿಗಳ ಪಾಲಿಗೆ ದೇವರು ಎಂಬುದನ್ನು ಮರೆಯಬೇಡಿ. ನಿಮ್ಮ ತಾಳ್ಮೆ ಮತ್ತು ಮಾನವೀಯತೆಯ ಸ್ಪಂದನೆಯಿಂದ ಜೀವ ಉಳಿಸಬಹುದಾಗಿದೆ ಎಂದು ತಿಳಿಸಿದರು.

ಕಲಿತಿದ್ದು ಜ್ಞಾನ, ಮುಂದಿರುವುದು ವಿಜ್ಞಾನ, ಅದನ್ನು ಆಧುನಿಕ ತಂತ್ರಜ್ಞಾನ ಮೂಲಕ ಮಾನವೀಯ ಮೌಲ್ಯಗಳ ಜತೆಗೆ ರೋಗಿಯ ಪಾಲಿನ ದೇವರಾಗಿ ವರ್ತಿಸಬೇಕು. ದುಡ್ಡೆ ಮುಖ್ಯವಲ್ಲ, ನೀವು ಮಾಡುವ ಸತ್ಕಾರ್ಯಗಳೇ ನಿಮಗೆ ಪುಣ್ಯದ ಫಲದ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಚೇರ್ಮನ್ ಮಹಾಂತೇಶ ಮಮದಾಪೂರ 2025ರ ಶಿಷ್ಯೋಪನಯನಕ್ಕೆ ಅನುವು ಮಾಡಿದರು.

ಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು.

ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಕ್ರಾಂತಿ ಕಿರಣ ಎಸ್., ರಾಜೀವ ಗಾಂಧಿ ಸಿಂಡಿಕೇಟ್ ಸದಸ್ಯ ಡಾ. ಕಿರಣ ಕುಳಗೇರಿ, ಪ್ರಾಚಾರ್ಯ ಡಾ. ಬಿ.ಎಂ. ಮುಲ್ಕಿಪಾಟೀಲ, ಡಾ ಎಸ್.ಬಿ. ನಿಡಗುಂದಿ, ಡಾ. ಸೋಮಶೇಖರ ಬಿರಾದಾರ, ಶಿವಕುಮಾರ ಪಾಟೀಲ, ಮಹೇಶ ಕರಿಗೌಡ್ರ ಸೇರಿ ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.

ಡಾ. ಶಂಕರಗೌಡ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಕು. ಅಶ್ವಿನಿ ಭಟ್ ವಿದ್ಯಾರ್ಥಿಗಳಿಗೆ ವೈದ್ಯ ಬೋಧನೆ ಮಾಡಿದರು.