ಜಿಲ್ಲೆ

ಅಸಂಸ್ಕೃತಿ ಮತ್ತು ಅನಾಗರೀಕ ಮಾತು ಎಂದು ಐಪಿಎಸ್ ಅಧಿಕಾರಿಯನ್ನು ಟೀಕಿಸಿದ ಡಾಕ್ಟರ್

ಗಂಗಾಧರ ಬಿ ವಿ

ರಾಮನಗರ: ಒಬ್ಬ ಹಿರಿಯ ಐಪಿಎಸ್​ ಅಧಿಕಾರಿಯಾಗಿದ್ದು, ಕುಮಾರಸ್ವಾಮಿ ಅವರ ವಿರುದ್ಧ ಕೀಳು ಮಟ್ಟದ ಭಾಷೆ ಬಳಕೆ ಮಾಡಿರುವ ಚಂದ್ರಶೇಖರ್​ ಅವರ ವಿರುದ್ಧ ಸಂಸತ್​ನಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿ, ಛೀಮಾರಿ ಹಾಕುವ ಕೆಲಸ ಆಗಬೇಕಿದೆ ಎಂದು ಸಂಸದ ಡಾ.ಸಿ.ಎನ್​ ಮಂಜುನಾಥ್​ ಅಭಿಪ್ರಾಯಪಟ್ಟರು.

ರಾಮನಗರದಲ್ಲಿ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲೀಷ್​ ಸಾಹಿತಿ ಜಾಜ್​ ರ್ಬನಾಡ್​ ಷಾ ತಮ್ಮ ಕಾದಂಬರಿಯಲ್ಲಿ ಬರೆದ ಸಾಲನ್ನು ಹಿಡಿದು ಕೊಂಡು ತಮ್ಮ ಆರೋಪಿಗಳ ಆರೋಪಕ್ಕೆ ಎದೆಗುಂದರೆ ಧೈರ್ಯವಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ನಂತರ ಕುಮಾರಸ್ವಾಮಿ ಅವರೂ ಸಹ ಓರ್ವ ಆರೋಪಿ ಎನ್ನುವ ಮೂಲಕ ನೇರವಾಗಿ ಕುಮಾರಸ್ವಾಮಿ ಅವರನ್ನು ನೇರವಾಗಿ ಪ್ರಾಣಿಗೆ ಹೋಲಿಕೆ ಮಾಡುವ ಕೆಲಸ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ಇಂತಹ ಅಧಿಕಾರಿಯ ವಿರುದ್ಧ ಉಗ್ರ ಕ್ರಮ ಆಗಲೇಬೇಕು ಎಂದು ಮಂಜುನಾಥ್​ ಒತ್ತಾಯಿಸಿದರು.

ಸಂಸತ್​ ಸದಸ್ಯದ ಕೇಂದ್ರದ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರ ಬಗ್ಗೆಯೇ ಈರೀತಿ ಮಾತನಾಡಿರುವ ಅವರು, ಇನ್ನು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಿರಿಬಾರದು ಎನ್ನುವ ಪ್ರಶ್ನೆಯೂ ಎದ್ದಿದೆ. ಇಂತಹ ಮಾತುಗಳ ಮೂಲಕ ಕುಮಾರಸ್ವಾಮಿ ಅವರ ವಿಚಾರದಲ್ಲಿ ಮಾತ್ರವಲ್ಲ ಸಂಪೂರ್ಣವಾಗಿ ವ್ಯವಸ್ಥೆ ಎಷ್ಟು ಕೆಟ್ಟಿದೆ ಎನ್ನುವುದನ್ನು ಅಧಿಕಾರಿ ತೋರಿಸಿಕೊಟ್ಟಿದ್ದಾರೆ.

ಅಧಿಕಾರಿಯ ಪದ ಬಳಕೆ ಅನಕ್ಷರಸ್ಥರಂತೆ ಇದೆ, ಇವರಿಗೆ ಎಷ್ಟೇ ಪದವಿ, ಪುರಸ್ಕಾರಗಳು ದೊರೆತಿರಬಹುದು. ಆದರೆ ಇವರ ನಡವಳಿಯಿಂದ ಇವರು ಅನಕ್ಷರಸ್ಥರಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ನಾಲಿಗೆಗೆ ಗಾಯ ಆದರೆ ಮಾಯವಾಗುತ್ತದೆ. ಆದರೆ ನಾಲಿಗೆಯಿಂದ ಗಾಯವಾದರೆ ಖಂಡಿತವಾಗಿ ಮಾಯುವುದಿಲ್ಲ ಎಂದರು.

ಚಂದ್ರಶೇಕರ್​ ಪತ್ರದ ಹಿಂದೆ ಸರ್ಕಾರ ಇದೆಯಾ ಎನ್ನುವ ಪ್ರಶ್ನೆಗೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಈ ಅನುಮಾನವನ್ನು ಕುಮಾರಸ್ವಾಮಿ ಅವರೂ ಸಹ ವ್ಯಕ್ತಪಡಿಸಿದ್ದಾರೆ. ಇದು ತನಿಖೆಯಿಂದರೆ ಬಹಿರಂಗಗೊಳ್ಳಬೇಕು.

ಆದರೆ, ಇಂತಹ ಅಧಿಕಾರಿ ವಿರುದ್ಧ ಕ್ರಮ ಆಗಲೇಬೇಕು, ಸಂಸತ್​ನಲ್ಲಿ ಛೀಮಾರಿ ಹಾಕಿದರೆ ಖಂಡಿತವಾಗಿ ಇಂತಹ ಮನಸ್ಥಿತಿಯ ಎಲ್ಲರಿಗೂ ಪಾಠ ಕಲಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಡಾ ಹಗರಣದಲ್ಲಿ ಸಿಎಂ ಪತ್ನಿ ನಿವೇಶನ ವಾಪಾಸ್​ ನೀಡಕೆ ಸಂಬಂಧ ಹೆಚ್ಚು ಪ್ರತಿಕ್ರಿಯೆ ನೀಡಿದ ಸಂಸದರು, ಈಗ ತನಿಖೆ ಆರಂಭವಾಗಿದೆ, ನೋಟೀಸ್​ ನೀಡಲಾಗಿದೆ ನೋಡೋಣ ಎಂದಷ್ಟೇ ಹೇಳಿದರು.

ಪರಿಹಾರಕ್ಕೆ ಸಚಿವರ ಬೇಟಿ: ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಬರದಲ್ಲಿ ಜಿಲ್ಲೆ ಮಾವು ಬೆಳೆಗಾರರಿಗೆ 57 ಕೋಟಿ ರೂ ಮತ್ತು 33 ಕೋಟಿ ರೂ ತೆಂಗು ಬೆಳೆಗಾರರಿ ನಷ್ಟ ಉಂಟಾಗಿದೆ. ಇನ್ನು ಪರಿಹಾರ ಬಿಡುಗಡೆ ಆಗಿಲ್ಲ ಎನ್ನುವ ಪ್ರಶ್ನೆಗೆ ಈಗಾಗಲೇ ಕೇಂದ್ರ ಕೃಷಿ ಸಚಿವರಿಗೆ ಪತ್ರ ನೀಡಿದ್ದೇನೆ, ದೆಹಲಿ ಬೇಟಿ ವೇಳೆ ಮತ್ತೊಮ್ಮೆ ಚರ್ಚೆ ಮಾಡಿ, ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.