ಚಿಕ್ಕಮಗಳೂರಿನಲ್ಲಿ ನಡೆದ ಅಲ್ಟ್ರಾ ಮ್ಯಾರಾಥಾನ್​ನಲ್ಲಿ ಪಾಲ್ಗೊಂಡ ವಿಜಯಪುರದ ರು ಸಾಲೋಟಗಿ ಮತ್ತು ಸಂದೀಪ ಮಡಗೊಂಡ 50 ಕಿಮೀ ಮತ್ತು ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ಶ್ರೀನಿವಾಸ ಸೊನ್ನದ 30 ಕಿಮೀ ಓಟದಲ್ಲಿ ಪಾಲ್ಗೊಂಡ ಬಳಿಕ ತಮ್ಮ ಸ್ನೇಹಿತರೊಂದಿಗೆ ಸಂತಸ ಹಂಚಿಕೊಂಡರು. 
ಜಿಲ್ಲೆ

ಮಲೆನಾಡು ಅಲ್ಟ್ರಾ ಮ್ಯಾರಾಥಾನ್​ನಲ್ಲಿ ಜಿಲ್ಲೆಯ ಸಾಧನೆ ಉತ್ತಮ

ವಿಜಯಪುರ: ಜಿಲ್ಲೆಯ ಕ್ರಿಯಾಶೀಲ ನಾಲ್ಕು ಜನ ಯುವಕರು ಕಠಿಣವಾದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್​ನಲ್ಲಿ ಪಾಲ್ಗೊಂಡು ಓಟವನ್ನು ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಶನಿವಾರ ಚಿಕ್ಕಮಗಳೂರಿನಲ್ಲಿ ನಡೆದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್​ನಲ್ಲಿ ಪಾಲ್ಗೊಂಡ ವಿಜಯಪುರದ ರು ಸಾಲೋಟಗಿ ಮತ್ತು ಸಂದೀಪ ಮಡಗೊಂಡ 50 ಕಿಮೀ. ಓಟ ಪೂರ್ಣಗೊಳಿಸಿದರೆ, ವೃಕ್ಷೊತ್ಥಾನ್​ ಹೆರಿಟೇಜ್​ ರನ್​&2024 ನೋಂದಣಿ ಸಮಿತಿ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ಶ್ರೀನಿವಾಸ ಸೊನ್ನದ 30 ಕಿಮೀ. ಓಟ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ. ಈ ಮೂವರು ಸಾಧಕರಿಗೆ ವೃಕ್ಷೊತ್ಥಾನ್​ ಹೆರಿಟೇಜ್​ ರನ್​ ಸಮಿತಿಯ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮಲೆನಾಡು ಅಲ್ಟ್ರಾ ಮ್ಯಾರಾಥಾನ್​ ಓಟಗಳಲ್ಲಿಯೇ ಕಠಿಣವಾದುದು ಎಂದೇ ಖ್ಯಾತಿ ಪಡೆದಿದೆ. ದಟ್ಟಕಾಡು, ಕಾಫಿ ಎಸ್ಟೇಟ್​, ಗುಡ್ಡಗಾಡು, ಕಿರಿದಾದ ರಸ್ತೆ, ಸ್ವಲ್ಪ ಆಯ ತಪ್ಪಿದರೂ ಆಳವಾದ ಕಂದಕಕ್ಕೆ ಬೀಳುವ ಆತಂಕ, ಕಾಡು ಪ್ರಾಣಿಗಳ ಭಯ, ಕೆಸರು ಪ್ರದೇಶ, ಹಳ್ಳಗಳನ್ನು ದಾಟಿ ಮುಂದೆ ಸಾಗುವುದು, ನೇರವಾದ ಗುಡ್ಡವನ್ನು ಹತ್ತುವಂಥ ಕಠಿಣ ಪರಿಸ್ಥಿತಿಯಲ್ಲಿ ಓಟಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಸಾಬೀತು ಪಡಿಸಿ ಈ ಓಟ ಪೂರ್ಣಗೊಳಿಸಬೇಕಾಗುತ್ತದೆ.

ಅಂತಹ ಸಂದರ್ಭದಲ್ಲಿ ಹೃದಯ ಬಡಿತವೂ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಓಟಗಾರರು ಸಾಕಷ್ಟು ಪೂರ್ವ ತಯಾರಿಸಿ ನಡೆಸುವ ಜತೆಗೆ ತ ಓಟಗಾರರಿಂದ ಸಂಪೂರ್ಣ ಮಾಹಿತಿ ಪಡೆದು ಪಾಲ್ಗೊಳ್ಳಬೇಕಾಗುತ್ತದೆ.