ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಹಲವು ಸಮಸ್ಯೆಗಳ ನಡುವೆಯೂ ಪ್ರಗತಿಪರ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಸುಸಜ್ಜಿತ ಮಣ್ಣಿನ ಪರೀಾ ಪ್ರಯೋಗಾಲಯದ ಅಗತ್ಯವಿದೆ.
ಹೌದು! ಪ್ರಸ್ತುತ ಮಣ್ಣಿನ ಫಲವತ್ತತೆ ಪರೀಸಿಕೊಂಡು ಪರೀೆಯ ಚೀಟಿ ಪಡೆದುಕೊಳ್ಳಲು ಖಾಸಗಿ ಸಂಸ್ಥೆಗಳನ್ನು ನೆಚ್ಚಿಕೊಳ್ಳುವಂತಾಗಿದೆ. ಇದಕ್ಕೆ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಪ್ರಯೋಗಾಲಯದ ಅಗತ್ಯವಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಪ್ರತಿ ವರ್ಷ ಜಿಲ್ಲಾದ್ಯಂತ ಕನಿಷ್ಠ 18 ಸಾವಿರ ಮಣ್ಣಿನ ಮಾದರಿ ಪರೀಸಿ, ರೈತರಿಗೆ ಚೀಟಿ ನೀಡುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 10,381 ಮಾದರಿ ಸಂಗ್ರಹಿಸಿ, 6,367 ಮಾದರಿ ವಿಶ್ಲೇಷಿಸಿ, ವರದಿ ನೀಡಲಾಗಿದೆ. ಒಂದು ಮಣ್ಣಿನ ಮಾದರಿ ಪರೀೆಗೆ ಕನಿಷ್ಠ 20 ನಿಮಿಷಬೇಕು.ಇದರ ನಡುವೆ ಸಿಬ್ಬಂದಿ ಕೊರತೆಗೆ ಪರೀಾ ಚೀಟಿ ಅರ್ಜಿದಾರರಿಗೆ ತಲುಪಿಸುವಲ್ಲಿ ವಿಳಂಬವಾಗುತ್ತಿದೆ. ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರನ್ನು ನಿಯೋಜಿಸಿದ್ದು ಪ್ರಯೋಗಾಲಯದಲ್ಲಿ ಪ್ರಸ್ತುತ ಪ್ರತಿ ಮಾದರಿಗೆ 10 ರೂ. ಶುಲ್ಕ ಪಡೆಯಲಾಗುತ್ತಿದ್ದು ಸಂಚಾರಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಪರೀೆ ಮಾಡಿಕೊಡಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಣ್ಣು ಪರೀಾ ಪ್ರಯೋಗಾಲಯ ನಿರ್ಮಾಣಕ್ಕೆ 2.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದನ್ನು ಬಳಸಿಕೊಂಡು ತ್ವರಿತವಾಗಿ ಕೇಂದ್ರ ನಿರ್ಮಿಸಬೇಕಾಗಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಮಣ್ಣಿನ ಆರೋಗ್ಯ ಮಹತ್ವ
ಪ್ರತಿ ವರ್ಷ ಅತಿಯಾದ ರಸಗೊಬ್ಬರ ಹಾಗೂ ಔಷಧಗಳ ಬಳಕೆ, ಮಣ್ಣಿನ ಫಲವತ್ತತೆಯ ಕಡೆಗಣನೆ, ಕಾಲ ತಕ್ಕಂತೆ ಬೆಳೆಯುವುದರ ಬದಲು ಉತ್ಪನ್ನಾಧಾರಿತ ಲಾಭದಾಯಕ ಬೆಳೆಗೆ ಆದ್ಯತೆ ಸೇರಿ ಅಸಡ್ಡೆ ಧೋರಣೆಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಗುಣಮಟ್ಟದ ಇಳುವರಿ ಸಿಗದೇ ಪರಿತಪಿಸುವಂತಹುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು?. ಮಣ್ಣಿನ ಫಲವತ್ತೆತೆ ಸುಧಾರಣೆ ಮತ್ತು ಹೆಚ್ಚಿನ ಪ್ರಮಾಣದ ಇಳುವರಿಗಾಗಿ ರ್ನಿದಿಷ್ಟ ಅವಧಿಗೆ ಮಣ್ಣಿನ ಆರೋಗ್ಯ ಪರೀೆ ಮಾಡಿಸಿಕೊಳ್ಳಬೇಕಾಗಿರುವುದು ಅಗತ್ಯವಿದೆ.
ಜಿಲ್ಲಾ ಕೇಂದ್ರಕ್ಕೆ ಬೇಕು?
ಪ್ರತಿಯೊಂದು ೇತ್ರವು ಆಧುನಿಕ ತಂತ್ರಜ್ಞಾನದಲ್ಲಿ ಮಹತ್ತರವಾದ ಬೆಳವಣಿಗೆ ಕಾಣುತ್ತಿದೆ. ಇದರ ನಡುವೆ ಪ್ರಗತಿಪರ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣಿನ ಪರೀೆಗೆ ಹೈಟೆಕ್ ಸೌಕರ್ಯಗಳನ್ನೊಳಗೊಂಡ ಪ್ರಯೋಗಾಲಯಗಳ ಸ್ಥಾಪನೆ ಅಗತ್ಯವಿದೆ. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ ಗುಣಮಟ್ಟದ ಸೇವೆ ಒದಗಿಸಬೇಕಾಗಿದೆ. ರೈತರಿಗೆ ಮಣ್ಣಿನ ಪರೀೆಯ ಮಹತ್ವ, ವಿಧಾನ, ಅನುಕೂಲ ಸೇರಿ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರು ರೈತರು ಜಮೀನಿನಲ್ಲಿ ಬೆಳೆ ಬೆಳೆಯುವುದರ ಮೊದಲು ಮಣ್ಣಿನ ಆರೋಗ್ಯ ಪರೀಸಿಕೊಳ್ಳುವಂತೆ ಉತ್ತೇಜಿಸಬೇಕಾಗಿದೆ. ಹೋಬಳಿವಾರು, ಗ್ರಾಮವಾರು ಹೊಸ ತಂತ್ರಜ್ಞಾನದ ಪರೀಾ ವ್ಯವಸ್ಥೆ ಇರಬೇಕು.
ಪರೀಾ ಕೇಂದ್ರ
ಚಿಂತಾಮಣಿ ತಾಲೂಕಿನ ಕಾಗತಿಯಲ್ಲಿ ಕೃಷಿ ಇಲಾಖೆಯಿಂದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಣ್ಣಿನ ಪರೀೆ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ನಿಗದಿತ ಮಾದರಿಗಳನ್ನು ಗ್ರಾಮವಾರು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ ಚೀಟಿ ನೀಡಲಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ಆರೋಗ್ಯ ಸಂಜೀವಿನ ಹೆಸರಿನಲ್ಲಿ ಎರಡು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ರೈತರ ಜಮೀನುಗಳಿಗೆ ಬಳಿ ತೆರಳಿ ಪ್ರತಿದಿನ 15 ರಿಂದ 20 ಮಣ್ಣು ಮಾದರಿ ಪರೀಸಲಾಗುತ್ತಿದೆ.
ಕೃಷಿ ಜಮೀನಿನಲ್ಲಿನ ಮಣ್ಣಿನ ಆರೋಗ್ಯ ಪರೀೆಗೆ ಪ್ರತಿ ಜಿಲ್ಲೆಯಲ್ಲೂ ಪ್ರಯೋಗಾಲಯಗಳು ಇರಬೇಕು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.
| ಯಲುವಹಳ್ಳಿ ಎನ್.ರಮೇಶ್, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ, ಚಿಕ್ಕಬಳ್ಳಾಪುರ