ಶಿವಮೊಗ್ಗ: ಟ್ರಾಕ್ಟರ್ ಹೊಡೆದು ಹೊಲದಲ್ಲಿದ್ದ ಬೆಳೆ ಹಾಳು ಮಾಡಿ ಮಹಿಳೆಗೆ ನಿಂದಿಸಿ ಹಲ್ಲೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 12 ಸಾವಿರ ರೂ. ದಂಡ ಮತ್ತು ಒಂದು ವರ್ಷದ ಅವಧಿಗೆ ಪ್ರತಿ ತಿಂಗಳ ಮೊದಲ ಭಾನುವಾರ ಪೊಲೀಸ್ ಅಧಿಕಾರಿ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ತಾಲೂಕಿನ ಸಿರಿಗೆರೆ ಗ್ರಾಮ ನೇತ್ರಾಜ(35) ಮತ್ತು ಅವರ ಪತ್ನಿ ಗಾಯತ್ರಿ (25) ಶಿಕ್ಷೆ ವಿಧಿಸಿದೆ. 2018ರ ಅ.15ರಂದು ಸಿರಿಗೆರೆ ಗ್ರಾಮದ 49 ವರ್ಷದ ಮಹಿಳೆಗೆ ಆಕೆಯ ಅಕ್ಕನ ಮಗ ನೇತ್ರಾಜ ಮತ್ತು ಆತನ ಪತ್ನಿ ಗಾಯತ್ರಿ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಲ್ಲದೆ, ಹೊಲದಲ್ಲಿದ್ದ ಬೆಳೆ ಹಾನಿ ಮಾಡಿ ಜೀವ ಬೆದರಿಕೆ ಹಾಕಿದ್ದರು. ಈ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಜಗದೀಶ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಆರೋಪ ಸಾಬೀತಾಗಿದ್ದರಿಂದ ದಂಪತಿಗೆ ದಂಡ ಮತ್ತು ಠಾಣೆಗೆ ಹಾಜರಾಗುವಂತೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಸುರೇಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.