ಜಿಲ್ಲೆ

ಬೆಳೆ ಹಾನಿ ಪರಿಶೀಲಿಸಿದ ಜಿಲ್ಲಾಧಿಕಾರಿ

ವಿವೇಕಾನಂದ ದಾಸನಕೊಪ್ಪ

ಹಿರೇಕೆರೂರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆದ ಹಾಳಾದ ಜಮೀನುಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಕಚವಿ, ಮಡ್ಲೂರು, ಚಿನ್ನಮುಳಗುಂದ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿ, ರೈತರೊಂದಿಗೆ ರ್ಚಚಿಸಿ ಮಾಹಿತಿ ಪಡೆದರು. ಮಡ್ಲೂರಿನ ಪರಮೇಶಪ್ಪ ಶಾಂತಪ್ಪ ಏಳುಕೊಳಗದ, ವೀರೇಶ ಅಜಪ್ಪ ಅಜ್ಜಪ್ಪನವರ, ಚಿನ್ನಮುಳಗುಂದ ಗ್ರಾಮದ ಭರಮಪ್ಪ ಬರಮಪ್ಪ ಕೋನಾಪುರ, ಮಲ್ಲಪ್ಪ ಕರಬಸಪ್ಪ ಮುಚಡೇರ, ನಾಗಪ್ಪ ನಾಗಣ್ಣನವರ, ದುರ್ಗಪ್ಪ ಕಡಕೋಳ, ಶಿವಕುಮಾರ ತಿರಕಪ್ಪ ಛಲವಾದಿ, ಬಸಪ್ಪ ಗುಡ್ಡಪ್ಪ ಛಲವಾದಿ, ಮಲ್ಲಪ್ಪ ನಿಂಗಪ್ಪ ಇಮ್ಮಡಿ, ಗೌರಮ್ಮ ಚನ್ನಬಸಪ್ಪ ಗೋಕಾವಿ, ಶೋಭಾ ಗುರುಶಾಂತಪ್ಪ ರಾಗೇರ, ಕಚವಿ ಗ್ರಾಮದ ವಿರೇಶ ಕೊರಿಶೆಟ್ಟರ, ಸಂತೋಷ ಕೊರಿಶೆಟ್ಟರ, ಸಂಗಪ್ಪ ಪೂಜಾರ ಜಮೀನುಗಳಿಗೆ ತೆರಳಿ ಬೆಳೆ ಹಾಳಾದ ಕುರಿತು ಮಾಹಿತಿ ಸಂಗ್ರಹಿಸಿದರು.

ಗ್ರೇಡ್-2 ತಹಸೀಲ್ದಾರ್ ಎಸ್.ಆರ್. ಸಿದ್ದನಗೌಡ್ರ, ಕಂದಾಯ ನಿರೀಕ್ಷಕ ಎಸ್.ಎಂ. ಬಣಕಾರ, ಗ್ರಾಮ ಆಡಳಿತಾಧಿಕಾರಿ ಸಿ.ಕೆ. ಹಳ್ಳೇಣ್ಣಿ, ಎ.ಎಂ. ಕಾಗಿನೆಲ್ಲಿ, ಬಸವರಾಜ ಬೂದನೂರ ಹಾಗೂ ಗ್ರಾಮಆಡಳಿತಾಧಿಕಾರಿಗಳು, ಪಿಡಿಒ ಮತ್ತು ರೈತರು ಇದ್ದರು.