ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಜಿಲ್ಲೆಯ ಕೆಲವೆಡೆ ಎದುರಾಗಿದ್ದ ಮತದಾನದ ಆತಂಕವನ್ನು ಸಮರ್ಥವಾಗಿ ನಿಭಾಯಿಸಿದ ಜಿಲ್ಲಾಡಳಿತ ಎಲ್ಲೆಡೆ ಸುಗಮ ಮತದಾನ ಪ್ರಕ್ರಿಯೆ ನಡೆಸುವಲ್ಲಿ ಯಶ ಕಂಡಿದೆ.
ಇದರಲ್ಲಿ ಪ್ರಮುಖವಾಗಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಭಾಗದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ವ್ಯಾಪ್ತಿಯ ಗೊಲ್ಲಹಳ್ಳಿ ತಾಂಡ ಮತದಾರರಿಂದ ಮತದಾನ ಮಾಡಿಸುವಲ್ಲಿ ಜಿಲ್ಲಾಡಳಿತ ಸಲವಾಗಿದೆ.
ಚುನಾವಣೆ ದಿನ ೋಷಣೆಯಾದ ದಿನದಿಂದಲೂ ಜಿಲ್ಲೆಯ ಅಲ್ಲಲ್ಲಿ ಮತದಾನ ಬಹಿಷ್ಕಾರದ ತಲೆಬಿಸಿ ಎದುರಿಸಿದ್ದ ಜಿಲ್ಲಾಡಳಿತ ಮತದಾರ ಮನವೊಲಿಸಲು ಸಾಕಷ್ಟು ಕಸರತ್ತು ನಡೆಸಿತ್ತು. ಮತದಾರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ಮೂಲಕ ಮತದಾನ ಮಾಡುವಂತೆ ಮನವೊಲಿಸುವ ಪ್ರಯತ್ನ ಕಡೆಗೂ ಲಿಸಿದೆ.
ಮತದಾನ ಮಾಡಿದ ಹೋರಾಟಗಾರರು:
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಕಳೆದ 2 ವರ್ಷದಿಂದ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಬಹಿಷ್ಕಾರಕ್ಕೆ ಹೋರಾಟಗಾರರು ಮುಂದಾಗಿದ್ದರು. ಸಮಸ್ಯೆ ಬಗೆಹರಿಸದಿದ್ದರೆ ಸುಮಾರು 13 ಹಳ್ಳಿಗಳ ಮತದಾರರು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿಸಿದ್ದರು. ಉಸ್ತುವಾರಿ ಸಚಿವರಾದಿಯಾಗಿ ಇಡೀ ಜಿಲ್ಲಾಡಳಿತವೇ ಹೋರಾಟಗಾರರ ಮನವೊಲಿಸಲು ಬೆವರು ಸುರಿಸಿತ್ತು. ಚುನಾವಣೆ ಬಳಿಕ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆಯೊಂದಿಗೆ ಚುನಾವಣಾ ಬಹಿಷ್ಕಾರದ ಆತಂಕವನ್ನು ದೂರಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಈ ಭಾಗದಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಜಿಲ್ಲಾಡಳಿತ ಮಾತಿಗೆ ಮನ್ನಣೆ ನೀಡಿದೆ. ಚುನಾವಣೆ ಮುಗಿದ ಬಳಿಕ ಜಿಲ್ಲಾಡಳಿತ ಕೊಟ್ಟ ಮಾತಿಗೆ ತಪ್ಪಿದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಮತದಾನ ಮಾಡಿದ ಬಳಿಕ ಭೂಸ್ವಾಧೀನ ವಿರೋಧಿ ಹೋರಾಟಗಾರರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸ್ಮಶಾನ, ಸಾಗುವಳಿ ಚೀಟಿಗೆ ಆಗ್ರಹ:
ಸ್ಮಶಾನಕ್ಕೆ ಜಮೀನು ಹಾಗೂ ಸಾಗುವಳಿ ಚೀಟಿ ಸೇರಿ ಇನ್ನಿತರ ಮೂಲಸೌಕರ್ಯ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದ ತೂಬಗೆರೆ ಹೋಬಳಿ ಗೊಲ್ಲಹಳ್ಳಿ ತಾಂಡ ಮತದಾರರು ಕೆಲವು ದಿನಗಳಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ರವಾನಿಸಿದ್ದರು. ಆದರೆ ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತಗಟ್ಟೆಯತ್ತ ದಾವಿಸಿದ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು.
ಹಲವು ವರ್ಷದಿಂದ ಸ್ಮಶಾನಕ್ಕೆ ಭೂಮಿ ಮಂಜೂರು ಹಾಗೂ ಸಾಗುವಳಿ ಚೀಟಿಗಾಗಿ ಅಲೆದಾಡುತ್ತಿದ್ದರೂ ಯಾವ ಜನಪ್ರತಿನಿಧಿಯೂ ಸ್ಪಂದಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು. ಮಹಿಳೆಯರೂ ಸೇರಿ ನೂರಾರು ಮಂದಿ ಜಮಾಯಿಸಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿದರು.ಮುಂಜಾನೆಯೇ ಮತಗಟ್ಟೆ ಬಳಿ ಆಗಮಿಸಿದ ಗ್ರಾಮಸ್ಥರು ಮಧ್ಯಾಹ್ನದವರೆಗೆ ಜಿಲ್ಲಾಡಳಿತ ವಿರುದ್ಧ ೋಷಣೆ ಕೂಗಿದರು.ಸ್ಥಳೀಯ ಚುನಾವಣಾ ಸಿಬ್ಬಂದಿ ಗ್ರಾಮಸ್ಥರ ಮನವೊಲಿಸುವ ಕಸರತ್ತು ನಡೆಸಿದರೂ ಗ್ರಾಮಸ್ಥರು ಮನವೊಲಿಕೆಗೆ ಬಗ್ಗಲಿಲ್ಲ.
ತಹಸೀಲ್ದಾರ್ ಭರವಸೆ:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ವಿಭಾವಿದ್ಯಾರಾಥೋಡ್ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು. ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು. ಕಡೆಗೆ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಹಸೀಲ್ದಾರ್ ವಾಗ್ದಾನ ಮಾಡಿದರು. ಗ್ರಾಮದ ಮುಖಂಡರು ತಹಸೀಲ್ದಾರ್ ಮಾತಿಗೆ ಮನ್ನಣೆ ನೀಡಿ ಮತದಾನ ಮಾಡುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬಂದರು. ಸಂಜೆ ವೇಳೆ ಪ್ರತಿಭಟನನಿರತರೆಲ್ಲರೂ ಮತದಾನ ಮಾಡಿದರು.