ರಾಯಚೂರು: ಸ್ಕಿಜೋಫ್ರಿನಿಯಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಖಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದು ಡಿಎಚ್‌ಒ ಡಾ.ಸುರೇಂದ್ರಬಾಬು ಹೇಳಿದರು.
ಸ್ಥಳೀಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸ್ಕಿಜೋಫ್ರಿನಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನ ಮಾನಸಿಕ ಭಾವನೆಗೆ ತೊಂದರೆ ನೀಡುವುದೇ ಮಾನಸಿಕ ಖಾಯಿಲೆಯಾಗಿದೆ ಎಂದರು.
ಸ್ಕಿಜೋಫ್ರಿನಿಯಾ ಮಾನಸಿಕ ಖಾಯಿಲೆಯಾಗಿದ್ದು, ಅದು ಯುವಕರಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದೆ. ಹಂತ ಹಂತವಾಗಿ ಖಾಯಿಲೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ಖಾಯಿಲೆಯನ್ನು ಕಂಡು ಹಿಡಿದು ಚಿಕಿತ್ಸೆ ಪಡೆಯಬೇಕು.
ಈ ಖಾಯಿಲೆ ಹೆಚ್ಚಾಗಿ ಅನುವಂಶಿಕವಾಗಿ ಬರುತ್ತದೆ. ಅದನ್ನು ಹೊರತುಪಡಿಸಿದರೆ ಖಾಯಿಲೆಯೂ ಸುತ್ತಮುತ್ತಲಿನ ವಾತಾವರಣದಿಂದ ಬರುವ ಸಾಧ್ಯತೆಗಳಿವೆ. ಮೆದುಳಿನಲ್ಲಿರುವ ರಸಾಯನಿಕಗಳ ವ್ಯತ್ಯಾಸದಿಂದಲೂ ಖಾಯಿದೆ ಬರುತ್ತಿದೆ. ಇದರಿಂದ ಅವರು ಸಮಾಜದಿಂದಲೂ ದೂರ ಉಳಿಯುತ್ತಾರೆ. ಆದ್ದರಿಂದ ಖಾಯಿಲೆಗೆ ಸೂಕ್ತ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಡಾ.ಸುರೇಂದ್ರಬಾಬು ಹೇಳಿದರು.
ಆರ್‌ಸಿಎಚ್ ಅಕಾರಿ ಡಾ.ನಂದಿತಾ ಮಾತನಾಡಿ, ಸ್ಕಿಜೋಫ್ರಿನಿಯಾ ಖಾಯಿಲೆ ಗರ್ಭೀಣಿಯಲರ‌್ಲಿ ಬರುವ ಸಾಧ್ಯತೆಗಳಿದ್ದು, ಗರ್ಭೀಣಿಯರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಖಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
ಮನೋ ವೈದ್ಯ ಡಾ.ಮನೋಹರ ಪತ್ತಾರ ಮಾತನಾಡಿ, ಜನಸಂಖ್ಯೆಯ ಕೇವಲ ಶೇ.1.5ರಷ್ಟು ಜನರಲ್ಲಿ ಸ್ಕಿಜೋಫ್ರಿನಿಯಾ ಖಾಯಿಲೆ ಕಂಡು ಬರುತ್ತದೆ. ಖಾಯಿಲೆಯ ಲಕ್ಷಣವಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದಲ್ಲಿ ಆ ವ್ಯಕ್ತಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಣಾಕಾರಿ ಡಾ.ಗಣೇಶ, ಜಿಲ್ಲಾ ಮಲೇರಿಯಾ ನಿಯಂತ್ರಣಾಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕುಷ್ಠರೋಗ ನಿವಾರಣಾಕಾರಿ ಡಾ.ಯಶೋಧಾ, ಜಿಲ್ಲಾ ಕುಟುಂಬ ಕಲ್ಯಾಣಾಕಾರಿ ಡಾ.ಶಿವಕುಮಾರ, ತಾಲುಕು ಆರೋಗ್ಯಾಕಾರಿ ಡಾ.ಪ್ರಜ್ವಲ್ ಉಪಸ್ಥಿತರಿದ್ದರು.