ಉಡುಪಿಯಲ್ಲಿ ಟಿಡಿಎಫ್ನ 7ನೇ ಶಾಖೆ ಉದ್ಘಾಟನೆ
ಚಿತ್ತಾಕರ್ಷಕ ವಜ್ರ-ಚಿನ್ನಾಭರಣಗಳ ಖಜಾನೆ
ದೇಶದಲ್ಲಿ ವಜ್ರಾಭರಣ ಮಾರಾಟ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ದಿ ಡೈಮಂಡ್ ಫ್ಯಾಕ್ಟರಿ (ಟಿಡಿಎಫ್)ಯು ಕೃಷ್ಣನೂರು ಉಡುಪಿಯಲ್ಲಿ ನವರಾತ್ರಿ ಆರಂಭದ ಶುಭದಿನದಂದು ತನ್ನ ಹೊಸ ಶಾಖೆಯನ್ನು ಶುಭಾರಂಭಗೊಳಿಸಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಗೀತಾಂಜಲಿ ರಸ್ತೆ ಮಾರ್ಗದಲ್ಲಿನ ಪಿವಿಎಸ್ ಟವರ್ (ಟಿವಿಎಸ್ ಮೋಟಾರ್ ಶೋರೂಂ ಮುಂಭಾಗ)ನಲ್ಲಿ ಗೋಲ್ಡ್, ಡೈಮಂಡ್, ಅನ್ಕಟ್, ಪ್ಲಾಟಿನಮ್ ಹಾಗೂ ಸಿಲ್ವರ್ ಆಭರಣಗಳ ಮಳಿಗೆ ತೆರೆದಿದೆ.
ಮಾದರಿ ಆಭರಣಗಳ ಸಂಗ್ರಹ
ಒಂದಕ್ಕಿಂತ ಇನ್ನೊಂದು ಆಕರ್ಷಕ ಶೈಲಿಯಲ್ಲಿ ಸಿದ್ಧಪಡಿಸಿರುವ ವಜ್ರಾಭರಣಗಳು ಖರೀದಿಗೆ ಆಗಮಿಸುವವರ ಮನ ಸೆಳೆಯುವಂತಿದೆ. ರಾಜಸ್ಥಾನಿ ಶೈಲಿಯ ಅನ್ಕಟ್ ಡೈಮಂಡ್ (ಪೋಲ್ಕಿ), ತಮನ್ನಾ, ಅಮೋರ್, ಲುಕ್ಸ್ ಲೈಟ್, ಮುಂಬಯಿ ಶೈಲಿಯ ಬ್ರೈಡಲ್ ಜುವೆಲ್ಲರಿ ಹೀಗೆ ವಿವಿಧ ಆಭರಣಗಳ ಮಾದರಿ ಸಂಗ್ರಹವಿದೆ. ಬಂಗಾರದಲ್ಲಿ ನಕಾಶ್, ಕೆಂಪು, ಸಂಸ್ಕೃತಿ ಹೀಗೆ ವಿವಿಧ ವಿನ್ಯಾಸದ ಆಭರಣಗಳು ಲಭ್ಯವಿದೆ. ಬೆಳ್ಳಿಯ ಚಿತ್ತಾಕರ್ಷಕ ಆಭರಣಗಳೂ ಇಲ್ಲಿವೆ.
ಶೇ.100 ಕ್ಯಾಶ್ಬ್ಯಾಕ್
ದಿನನಿತ್ಯ ಬಳಕೆಯ ಅದರಲ್ಲೂ ಡಾಝ್ ಶೈಲಿಯ ಚಿನ್ನಾಭರಣಗಳು 15 ಸಾವಿರ ರೂ.ನಿಂದ ಆರಂಭಿಸಿ, ಬ್ರೈಡಲ್ ಜುವೆಲ್ಲರಿಗಳು 3 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗಿನ ದರಗಳಲ್ಲಿ ಲಭ್ಯವಿದೆ. ನವರಾತ್ರಿ ಹಬ್ಬದ ನಿಮಿತ್ತ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನೂ ಘೋಷಿಸಲಾಗಿದೆ. ಆಭರಣಗಳ ಮೇಕಿಂಗ್ ಚಾರ್ಜಸ್ನಲ್ಲಿ ಶೇ.100ರ ವರೆಗೆ ಕ್ಯಾಶ್ಬ್ಯಾಕ್ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಟಿಡಿಎಫ್ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಡಿಂಪಿ, ರೋಶನಿ, ಶ್ವೇತಾ, ಪ್ರೇಮಲತಾ ಎಸ್. ಹೆಗ್ಡೆ, ಜಯಲಕ್ಷ್ಮೀ ಜೆ. ಹೆಗ್ಡೆ, ಉಷಾಲತಾ ಶೆಟ್ಟಿ, ಕೃಷ್ಣಕುಮಾರಿ ಇತರರು ಉಪಸ್ಥಿತರಿದ್ದರು.
ಎರಡು ರಾಜ್ಯಗಳಲ್ಲಿ ಒಟ್ಟು 8 ಮಳಿಗೆ
ಗುಣಮಟ್ಟದ ಆಭರಣಗಳ ಮೂಲಕ ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಟಿಡಿಎಫ್, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 8 ಮಳಿಗೆಯನ್ನು ಹೊಂದಿದೆ. ಮುಂಬಯಿಯಲ್ಲಿ 5, ಮಂಗಳೂರು ಹಾಗೂ ಉಡುಪಿಯಲ್ಲಿ ತಲಾ 1 ಹಾಗೂ ಮುಂದಿನ ವಾರ ಮುಂಬಯಿಯ ಘಾಟ್ಕೋಪರ್ನಲ್ಲಿ ಇನ್ನೊಂದು ಶಾಖೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮಾಲೀಕರು ಹಾಗೂ ಸಹ ಸಂಸ್ಥಾಪಕರಾದ ಪ್ರಸನ್ನ ಶೆಟ್ಟಿ, ಗೌತಮ್ ಸಿಂಗ್ವಿ ತಿಳಿಸಿದರು.
ಗುಣಮಟ್ಟ ಕಾಯ್ದುಕೊಂಡ ವಿಶ್ವಾಸಿ ಸಂಸ್ಥೆ
ಉಡುಪಿಯಲ್ಲಿ ಸಂಸ್ಥೆಯ 7ನೇ ಮಳಿಗೆ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಟಿಡಿಎಫ್ ಮಳಿಗೆಯು ಆಭರಣಗಳ ಗುಣಮಟ್ಟ ಕಾಯ್ದುಕೊಂಡ ವಿಶ್ವಾಸಿ ಸಂಸ್ಥೆಯಾಗಿದೆ. ಕರಾವಳಿಯವರು ಶ್ರಮ ಸಂಸ್ಕೃತಿಗೆ ಹೆಸರಾದವರು. ಇದರ ಮಾಲೀಕರೂ ಸಹ ಕರಾವಳಿ ಮೂಲದವರೇ ಆಗಿದ್ದಾರೆ. ಸಂಕಲ್ಪ ಶುದ್ಧಿಯಿದ್ದಲ್ಲಿ ಸಾಧನೆ ಸುಲಭವಾಗುತ್ತದೆ. ಒಂದು ರಾತ್ರಿ-ಹಗಲಲ್ಲಿ ಸಾಧನೆ ಅಸಾಧ್ಯ. ಅದಕ್ಕೆ ನಂಬಿರುವ ದೇವರ ಕೃಪೆ, ನಿರಂತರ ಪರಿಶ್ರಮ ಅಗತ್ಯ. ಟಿಡಿಎಫ್ ತಂಡ ಆಭರಣ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು ಸ್ಥಾಪಿಸಲಿ ಎಂದು ಶುಭಹಾರೈಸಿದರು.
ಉಡುಪಿ-ಮಂಗಳೂರಿನಲ್ಲಿ ಕಳೆದ 16 ವರ್ಷದಿಂದ ಟಿಡಿಎಫ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತಿದ್ದೆವು. ಮಂಗಳೂರಿನಲ್ಲಿ ಔಟ್ಲೆಟ್ ಹೊಂದಿದ್ದು, ಉಡುಪಿಯಲ್ಲೂ ಮಳಿಗೆ ತೆರೆಯಬೇಕೆಂಬ ಕನಸಿತ್ತು. ಅದು ನವರಾತ್ರಿಯ ಶುಭದಿನದಂದು ಆರಂಭಗೊಂಡಿದೆ. ಗ್ರಾಹಕರಿಗೆ ನಗುಮೊಗದ ಸೇವೆಯೊಂದಿಗೆ ಗುಣಮಟ್ಟದ ಆಭರಣ ಒದಗಿಸಲು ಟಿಡಿಎಫ್ ಬದ್ಧವಿದೆ.
| ವಿರಾಜ ಹೆಗ್ಡೆ, ಸುಧಾ ಶೆಟ್ಟಿ. ಅಸೋಸಿಯೇಟ್ ಪಾರ್ಟ್ನರ್ಸ್.