ಜಿಲ್ಲೆ

ಗ್ರಾಮದೇವತೆಯರ ಉಡಿ ತುಂಬಿದ ಭಕ್ತರು

ಕಟಕೋಳ: ಗ್ರಾಮದೇವತೆಯರ ಜಾತ್ರೆ ಮೂರನೆ ದಿನವಾದ ಗುರುವಾರ ಬೇರೆ ಊರಿನಿಂದ ಆಗಮಿಸಿದ ಭಕ್ತರು ಮತ್ತು ಊರಿನ ಎಲ್ಲ ಹೆಣ್ಣುಮಕ್ಕಳು ಅಂಕಿ ಚೌಡಿ ಎದುರಿನ ಕಟ್ಟೆಯಲ್ಲಿ ಆಸೀನರಾದ ದೇವಿಯರಿಗೆ ತಂಡೋಪತಂಡವಾಗಿ ಉಡಿ ತುಂಬಿದರು. ಊರು ಭಂಡಾರಮಯವಾಗಿ ಕಂಗೊಳಿಸಿತು. ಶಾಸಕ ಅಶೋಕ ಪಟ್ಟಣ ಹಾಗೂ ರಾಯಪ್ಪ ಕತ್ತಿ ಪ್ರಾಯೋಜಕತ್ವದಲ್ಲಿ ಸುಪ್ರೀತ ಪಾಟೀಲ ಗೆಳೆಯರ ಬಳಗದಿಂದ ರಾಜ್ಯಮಟ್ಟದ ತರೆಬಂಡಿ ಸ್ಪರ್ಧೆಯ ಉದ್ಘಾಟನೆಯನ್ನು ಯುವನಾಯಕ ಅನಿಕೇತನ ಪಟ್ಟಣ ಹಾಗೂ ರಾಯಪ್ಪ ಕತ್ತಿ ಉದ್ಘಾಟಿಸಿದರು.

ಇಂದು ರಸಮಂಜರಿ, ಕುದರೆ ಬಂಡಿ ಸ್ಪರ್ಧೆ ಆಯೋಜನೆ: ಮೇ 30ರಂದು ಗೆಳಯರ ಬಳಗದ ವತಿಯಿಂದ ಗದಗದ ಎ.ನ್​. ಮುರಾರಿ ತಂಡದಿಂದ ರಸಮಂಜರಿ ಕಾರ್ಯಕ್ರಮ ಬಜಾರ ಪೇಟೆಯಲ್ಲ್ಲಿ ಜರುಗಲಿದೆ ಹಾಗೂ ಗೊಡಚಿ ರಸ್ತೆಯಲ್ಲಿ ಕುದರೆ ಬಂಡಿ ಸ್ಪರ್ಧೆ ನಡೆಯಲಿದೆ. ಪೋಲಿಸ್​ ಇಲಾಖೆ ವಿಶೇಷ ಬಂದೋಬಸ್ತ್​ ಏರ್ಪಡಿಸಿದೆ.