ಮಂಜೇಶ್ವರ: ದೇವಸ್ಥಾನ ಅಭಿವೃದ್ಧಿಯಾದರೆ ಊರು ಅಭಿವೃದ್ಧಿಯಾದಂತೆ, ದೇವಸ್ಥಾನಗಳು ಊರಿನ ಹೆಸರಿನೊಂದಿಗೆ ಗುರುತಿಸಲ್ಪಡಬೇಕು. ಅದಕ್ಕೊಂದು ಉದಾಹರಣೆ ಎಂಬಂತೆ ಕೀರ್ತೆಶ್ವರ ಊರು ದೇವರ ಅನುಗ್ರಹದಿಂದ ಕೀರ್ತಿವಂತವಾಗಿದೆ. ಊರಿನ ಭಗವದ್ಭಕ್ತರ ಕೊಡುಗೆಯಿಂದ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಗಳು ಸಾಕಾರವಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ನೂತನ ರಾಜಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನವಿತ್ತರು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಅಂತರಂಗದಲ್ಲಿ ದೇವರನ್ನು ನೆನೆದರೆ ಎಲ್ಲರೂ ದೇವರಂತೆ ಕಾಣುತ್ತಾರೆ. ಅಣುರೇಣು ಕಣದಲ್ಲಿ ದೇವರಿದ್ದಾನೆ. ದೇವರನ್ನು ಅಂತರಮುಖ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು. ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ತಂತ್ರಿ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಮುಂಡಪ್ಪಳ್ಳ, ಮಂಜೇಶ್ವರ ಶ್ರೀ ಶನೈಶ್ಚರ ದೇವಸ್ಥಾನ ಧರ್ಮದರ್ಶಿ ಕೃಷ್ಣ ಭಟ್ ಮಂಜೇಶ್ವರ, ಕ್ಷೇತ್ರದ ಪ್ರಧಾನ ಅರ್ಚಕ ರವೀಶ್ ಭಟ್ ಕೀರ್ತೇಶ್ವರ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಳಪ್ಪಾಡ, ಕ್ಷೇತ್ರದ ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಂಘ ಅತ್ತಾವರ, ಮಂಗಳೂರಿನ ಅಧ್ಯಕ್ಷ ವಿಶ್ವಾಸ್ ದಾಸ್, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವನಾಥ ಪೊಯ್ಯಕಂಡ ಶುಭಾಶಂಸನೆಗೈದರು.
ಗೋಪುರ ನಿರ್ಮಾಣದ ದಾನಿಗಳಾದ ಕೆ.ಕೆ.ಶೆಟ್ಟಿ ಮುಂಡಪ್ಪಳ್ಳ ಮತ್ತು ರಾಜಸ್ಥಾನದ ಉದ್ಯಮಿ ಸತೀಶ್ ಉಚ್ಚಿಲರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟ್ಟಿಬೈಲ್ ಕೀರ್ತೇಶ್ವರ ಸ್ವಾಗತಿಸಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ ಪ್ರಾಸ್ತಾವಿಕ ಮಾತನಾಡಿ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಶ್ ಅಂಜರೆ ವಂದಿಸಿದರು.
ಪೂಜ್ಯ ತಂತ್ರಿಗಳು ಮತ್ತು ಪೂಜ್ಯ ಸ್ವಾಮೀಜಿಗಳವರ ಆಶೀರ್ವಾದದೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಮುಂದಾಳು ಕೊಡುಗೈದಾನಿ ಕೆ.ಕೆ ಶೆಟ್ಟಿ ಮುಂಡಪ್ಪಳ್ಳ ನೂತನ ರಾಜಗೋಪುರದ ಭೂಮಿಗೆ ಹಾಲೆರೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಬೆಳಗ್ಗೆ ಕ್ಷೇತ್ರದ ಪ್ರಧಾನ ಅರ್ಚಕ ರವೀಶ್ ಭಟ್ ಕಾಸರಗೋಡು ಅವರಿಂದ ಭೂಮಿ ಪೂಜೆ ಕಾರ್ಯ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಕ್ಷೇತ್ರ ಸುಮಾರು 1 ಕೋಟಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲ್ಲಿದ್ದು. ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನೆರವೇರಲಿದೆ.
ಸತ್ಕರ್ಮ, ದಾನಗಳಿಂದ ನಮ್ಮ ಹೆಸರು ನಾವು ಅಳಿದ ಮೇಲೂ ಉಳಿಯುತ್ತದೆ. ಧರ್ಮ ಶ್ರದ್ಧೆಯಿಂದ ಉತ್ತಮವಾದ ಸಮಾಜ, ರಾಷ್ಟ್ರ ನಿರ್ಮಾಣ ಸಾಧ್ಯ. ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರುಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು