ಜಿಲ್ಲೆ

ಪರಿಸರ ನಾಶದಿಂದ ರೈತರ ವಿನಾಶ ನಿಶ್ಚಿತ

ಶೃಂಗೇರಿ: ಪ್ರತಿ ದಿನ ಹೆಚ್ಚಾಗುತ್ತಿರುವ ಪರಿಸರ ನಾಶದ ಪಿಡುಗು ನೇರವಾಗಿ ರೈತರ ಮೇಲೆ ಪರಿಣಾಮ ಬೀರುವುದರಿಂದ ಪರಿಸರ ರಕ್ಷಣೆಯಲ್ಲಿ ರೈತರ ಪಾತ್ರ ಮಹತ್ವವಾಗಿದೆ ಎಂದು ಪ್ರಾಧ್ಯಾಪಕ ಎಂ.ವಿ.ಕೇಶವ ಮೂರ್ತಿ ಹೇಳಿದರು.

ನೆಮ್ಮಾರ್ ಗ್ರಾಮ ಪಂಚಾಯಿತಿಯ ಹೊಸದೇವರ ಹಡ್ಲಿನಲ್ಲಿ ಅಜಸ್ರ ಸಂಶೋಧನಾ ಕೇಂದ್ರದಲ್ಲಿ ಎರಡು ದಿನದ ವಾರ್ಷಿಕ ಕಪ್ಪೆ ಶಿಬಿರದಲ್ಲಿ ಮಾತನಾಡಿ, ಕಪ್ಪೆ ಪ್ರಕತಿಯಲ್ಲಿ ಅತ್ಯಂತ ಮುಖ್ಯವಾದ ವಿಶಿಷ್ಟವಾದ ಉಭಯಚರ ಪ್ರಾಣಿ ವರ್ಗಕ್ಕೆ ಸೇರಿದೆ. ಇವು ಭೂಮಿಯಲ್ಲಿ ಸುಮಾರು 250 ಮಿಲಿಯನ್ ವರ್ಷದಿಂದ ಅಸ್ತಿತ್ವ ಹೊಂದಿದೆ. ಉಭಯಚರ ಪ್ರಾಣಿಯಾಗಿ ಇವು ತಮ್ಮ ಜೀವನಚಕ್ರದ ಒಂದು ಭಾಗವನ್ನು ನೀರಿನಲ್ಲಿ ಹಾಗೂ ಮತ್ತೊಂದು ಭಾಗವನ್ನು ಭೂಮಿ ಮೇಲೆ ಕಳೆಯುತ್ತದೆ. ಇಂಥಹ ವಿಶೇಷ ಜೀವನ ಶೈಲಿಯು ಪರಿಸರದ ತೀವ್ರ ಬದಲಾವಣೆಯಿಂದ ಇವು ಅಳಿವಿನ ಅಂಚಿಗೆ ಜಾರುತ್ತಿದೆ. ಭೂಮಿ ಮೇಲೆ ಬದುಕುತ್ತಿರುವ ಕಪ್ಪೆ ಜಾತಿಗಳು ತೀವ್ರ ಅಪಾಯದಲ್ಲಿದೆ ಎಂದರು.

ಮಣಿಪಾಲದ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕ ವಿಶ್ವಜಿತ್ ಮಾತನಾಡಿ, ಕಪ್ಪೆ ಪ್ರಕೃತಿಯಲ್ಲಿ ವಿಶಿಷ್ಟವಾದ ಜೀವನ ಶೈಲಿಯನ್ನು ಹೊಂದಿದೆ. ಅವುಗಳನ್ನು ಗುರುತಿಸುವುದು ಅವುಗಳ ಕೂಗಿನ ಆಧಾರದ ಮೇಲೆ ವಿವಿಧ ರೀತಿಯಾಗಿ ವಿಂಗಡಿಸಬಹುದಾಗಿದೆ ಎಂದರು. ಡಾ.ಕೃಷ್ಣಕುಲಕರ್ಣೀ, ಪ್ರಕಾಶ್, ಡಾ.ಅಭಿಜಿತ್, ಶಶಾಂಕ್,ಕಿರಣ್, ಕೀರ್ತನ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.