ಹೊಸನಗರ ತಾಲೂಕು ಮಾರುತಿಪುರದಲ್ಲಿ ಯುವ ಭಾಗವತ ಸೃಜನ್ ಗಣೇಶ್ ಹೆಗಡೆ ಗುಂಡೂಮನೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗುರಣ್ಣ ಹೆಬ್ಬಾಳ, ರುದ್ರೇಶ್ ಗೌಡ, ತಾರಕೇಶ್ವರ ಗೌಡ ಇತರರಿದ್ದರು.  
ಜಿಲ್ಲೆ

ತವರೂರ ಜನರ ಹಾರೈಕೆ ಯಶಸ್ಸಿನ ಮೊದಲ ಮೆಟ್ಟಿಲು

ಹೊಸನಗರ: ಯುವ ಕಲಾ ಪ್ರತಿಭೆಗಳಿಗೆ ಹುಟ್ಟಿದ ಊರ ಜನರ ಅಭಿಮಾನದ ಹಾರೈಕೆ ಯಶಸ್ಸಿನ ಮೊದಲ ಮೆಟ್ಟಿಲು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಮಾರುತಿಪುರ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ಸಾಲಿಗ್ರಾಮ ಯಕ್ಷಗಾನ ಮೇಳದವರು ಏರ್ಪಡಿಸಿದ್ದ ನೀಲ ಗಗನದೊಳು ಯಕ್ಷಗಾನ ಪ್ರದರ್ಶನದ ವೇಳೆ ಯಕ್ಷ ಬಳಗ ಮಾರುತಿಪುರ ಮತ್ತು ಗ್ರಾಮಸ್ಥರು, ಊರ ಪ್ರತಿಭೆ, ಯುವ ಭಾಗವತ ಸೃಜನ್ ಗಣೇಶ್ ಹೆಗಡೆ ಗುಂಡೂಮನೆ ಅವರಿಗೆ ಕೊಡ ಮಾಡಿದ ಪ್ರೋತ್ಸಾಹ ಪೂರ್ವಕ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶುಭ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೃಜನ್‌ಗಣೇಶ್ ಹೆಗಡೆ, ಕಲಿಯುವ ಮನಸ್ಸಿನಿಂದ ಬೆಳೆಯುತ್ತಿರುವ ನನಗೆ ಊರಿನ ಜನರು ತೋರಿರುವ ಪ್ರೀತಿ ಮತ್ತಷ್ಟು ಜವಾಬ್ದಾರಿ ನೀಡಿದೆ. ಅಧ್ಯಯನಶೀಲ ನನ್ನ ಮನಸ್ಥಿತಿಗೆ ಇಡೀ ಮೇಳದಲ್ಲಿರುವ ಕಲಾವಿದರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಇದು ಬೆಳೆಯುವುದಕ್ಕೆ ಸಹಕಾರಿಯಾಗಿದೆ ಜತೆಗೆ ಊರ ಜನರ ಅಭಿಮಾನದ ಶ್ರೀರಕ್ಷೆಯೂ ದೊರೆತಿರುವುದು ಸಂತಸ ತಂದಿದೆ ಎಂದರು.
ಸರ್ಕಲ್ ಇನ್‌ಸ್ಪೆಕ್ಟರ್ ಗುರಣ್ಣ ಹೆಬ್ಬಾಳ್, ಯಕ್ಷ ಬಳಗದ ರುದ್ರೇಶ ಗೌಡ ಬಸವನಗುಂಡಿ, ಗ್ರಾಪಂ ಮಾಜಿ ಅಧ್ಯಕ್ಷ ತಾರಕೇಶ್ವರ ಗೌಡ, ಎಸ್.ಕೆ.ರಾಜಪ್ಪ ಇತರರಿದ್ದರು.