ಶಿರಹಟ್ಟಿ: ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು ನಮ್ಮ ಪ್ರಮುಖ ಬೇಡಿಕೆ ಎಂದು ಪೌರ ಕಾರ್ಮಿಕರ ಸಂಘದ ಸಂಘಟನಾ ಕಾರ್ಯದರ್ಶಿ ಉಡಚಪ್ಪ ದ್ಯಾ. ನೀಲಣ್ಣವರ ಹೇಳಿದರು.
ಪಪಂ ಮುಂಭಾಗ ಮಂಗಳವಾರ ಕರ್ನಾಟಕ ಪೌರ ನೌಕರರ ಸಂಘದ ಶಿರಹಟ್ಟಿ ಶಾಖೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಸ್ವಚ್ಛತಾ ಕಾರ್ಯ ನಿಲ್ಲಿಸಿದ್ದೇವೆ ಎಂದು ಹೇಳಿದರು.
ಫಕೀರೇಶ ದೊ. ಬಂತಿ, ಹನುಮಂತ ಕೊಡ್ಲಿ, ನಾಗೇಶ ಕುಲಕರ್ಣಿ, ದುರ್ಗಪ್ಪ ಗುಡಿಮನಿ, ಮರಿಯಪ್ಪ ಪೂಜಾರ, ಉಮೇಶ ಬಡೆಣ್ಣವರ, ಮರಿಯಪ್ಪ ಗುಡಿಮನಿ, ಲಕ್ಷ್ಮಣ ಮಳ್ಳಣ್ಣವರ, ನೀಲವ್ವ ಗುಡಿಮನಿ, ರತ್ನವ್ವ ಬಡೆಣ್ಣವರ, ಬಸವಣ್ಣೆವ್ವ ಗುಡಿಮನಿ, ಯಲ್ಲವ್ವ ಗೊಡೆಣ್ಣವರ, ದಾಕ್ಷಾಯಣಿ ಕಂಟೆಮ್ಮನವರ, ನಿಂಗವ್ವ ಮರಚಣ್ಣವರ, ಹನುಮವ್ವ ಗುಡಿಮನಿ, ಸಾವಕ್ಕೆ ಗುಡಿಮನಿ ಇತರರಿದ್ದರು.