ಆಲೂರು ತಾಲೂಕಿನ ಹರಿಹಳ್ಳಿ ಗ್ರಾಮದಲ್ಲಿರುವ ಹಾಸನಾಂಬ ದೇವಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಅಂಗವಾಗಿ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕೆಯರ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು 
ಜಿಲ್ಲೆ

ಶ್ರೀ ಕೆಂಚಾಂಬಿಕೆಗೆ ಸಪ್ತಮಾತೃಕೆಯರ ಅಲಂಕಾರ

ಆಲೂರು: ತಾಲೂಕಿನ ಹರಿಹಳ್ಳಿಯಲ್ಲಿರುವ ಹಾಸನಾಂಬ ದೇವಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಅಂಗವಾಗಿ ಮೂಲದೇವಸ್ಥಾನದಲ್ಲಿ ಶನಿವಾರ ಸಪ್ತಮಾತೃಕೆಯರ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಾಸನಾಂಬ ದರ್ಶನ ಅವಕಾಶ ಮುಗಿದ ಬಳಿಕ ಸಪ್ತ ಮಾತೃಕೆಯರ ಆರಾಧನೆ ನಡೆಯುತ್ತದೆ. ರಾತ್ರಿ ದೇವಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಇಪ್ಪತ್ತೊಂದು ಸೀರೆಗಳು, ಏಳು ಮುಖಗಳು, ವಿವಿಧ ಹೂಗಳು, ದಂಡ, ಷಡ್ಗೋಪುರ ಮೊದಲಾದವುಗಳಿಂದ ಅಲಂಕರಿಸಲಾಗಿತ್ತು. ದೇವಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮ, ಸಹಸ್ರನಾಮಗಳಿಂದ ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿಯನ್ನು ಪ್ರಧಾನ ಅರ್ಚಕ ರಾಮಸ್ವಾಮಿ ನೆರವೇರಿಸಿದರು.