ಜಿಲ್ಲೆ

ವಿಮೆ ಪಾವತಿಗೆ ಡಿ.15 ಗಡವು

ಬೆಳಗಾವಿ: ಹಿಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಆಲೂಗಡ್ಡೆ ಮತ್ತು ಟೊಮ್ಯಾಟೋ ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ.

ಆಲೂಗಡ್ಡೆ ಬೆಳೆಗೆ ರೈತರು ಪ್ರತಿ ಹೆಕ್ಟರ್‌ಗೆ 2,228 ರೂ.ಗಳಂತೆ ಹಾಗೂ ಟೊಮ್ಯಾಟೋ ಬೆಳೆಗೆ ಪ್ರತಿ ಹೆಕ್ಟರ್‌ಗೆ 3,467 ರೂ.ಗಳಂತೆ ಡಿ.15ರ ಒಳಗಾಗಿ ವಿಮೆ ಕಂತನ್ನು ಪಾವತಿಸಬೇಕು. ವಿಮೆ ಪಾವತಿಸಲು ಪ್ರಸಕ್ತ ಸಾಲಿನ ಪಹಣಿ, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಬಹುದಾಗಿದೆ ಎಂದು ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾನಾಪುರ ವರದಿ: ಖಾನಾಪುರ ತಾಲೂಕಿನ ಖಾನಾಪುರ ಹಾಗೂ ಬೀಡಿ ಹೋಬಳಿಗಳಿಗೆ ಮೆಣಸಿನಕಾಯಿ ಬೆಳೆ ವಿಮಾ ಕಂತನ್ನು ರೈತರು ಪ್ರತಿ ಹೆಕ್ಟೇರ್‌ಗೆ 3,550ರೂ. ನಂತೆ ನ.15ರ ಒಳಗಾಗಿ ಪಾವತಿಸಬಹುದಾಗಿದೆ ಎಂದು ಖಾನಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.