ಜಿಲ್ಲೆ

ಕಪ್ಪಾದ ಆಕಾಶ ಬೆಳಗಾಯಿತಲೇ ಪರಾಕ್​

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವಿದ್ಯಾಗಿರಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ 59ನೇ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಶ್ರೀ ಮೈಲಾರಲಿಂಗ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರು "ಕಪ್ಪಾದ ಆಕಾಶ ಬೆಳಗಾಯಿತಲೇ ಪರಾಕ್​' ಎಂದು ಕಾರ್ಣಿಕ ನುಡಿದರು.

ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ , ಸರಪಳಿ ಸೇವೆಗಳು ವಿಜೃಂಭಣೆಯಿಂದ ಜರುಗಿದವು.

ದೇಶದ ಪ್ರಜೆ ಸಮೃದ್ಧಿ ಹೊಂದುತ್ತಾರೆ. ರಾಜಕೀಯ ಬದಲಾವಣೆಗಳನ್ನು ಕಾಣಬಹುದು. ದೇಶ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಹೊಂದಲಿದೆ ಎಂದು ಮಾಜಿ ಕಾರ್ಣಿಕ ಪುರುಷ ತಿಪ್ಪಣ್ಣ ಸಂಗಪ್ಪ ಶಿರೋಳ ಅವರು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.