ಚಿಕ್ಕಬೇವನೂರ ಗ್ರಾಮದ ಸದಾಶಿವ ಅಜ್ಜನ ಮಠದಲ್ಲಿ ಆಯೋಜಿಸಿದ್ದ ನೂತನ ಕ್ಯಾಲೆಂಡರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರವಾಡದ ಓಂಕಾರಯ್ಯ ಶ್ರೀಗಳು ಕ್ಯಾಲೆಂಡರ್​ ಬಿಡುಗಡೆಗೊಳಿಸಿದರು. ಉಮೇಶ ಬಳಬಟ್ಟಿ, ಮಲ್ಲಿಕಾರ್ಜುನ ಬಿರಾದಾರ, ರಾಚು ಹಂಜಗಿ, ಶಂಕರ ದೇಸಾಯಿ, ಅಶೋಕ ಅಗಸರ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರಸಕ್ತ ವರ್ಷ ಅಷ್ಟೂ ಪೂರಕವಾಗಿಲ್ಲ

ಗಿರೀಶ ಸಗರ

ಇಂಡಿ: ಸಾರವಾಡದ ಕಾಲಜ್ಞಾನ ಅದ್ಭುತವಾದದ್ದು. ಈ ಭವ್ಯ ಪರಂಪರೆಯ ಮೂಲ ಪುರುಷನೇ ಸಾರವಾಡದ ಚಿಕ್ಕಪ್ಪಯ್ಯ ಎಂದು ಸಾರವಾಡದ ಓಂಕಾರಯ್ಯ ಶ್ರೀಗಳು ಹೇಳಿದರು.

ತಾಲೂಕಿನ ಚಿಕ್ಕಬೇವನೂರ ಗ್ರಾಮದ ಸದಾಶಿವ ಅಜ್ಜನ ಮಠದಲ್ಲಿ ಚಿಕ್ಕಬೇವನೂರ ಗೆಳೆಯರ ಬಳಗವು ಬುಧವಾರ ಹಮ್ಮಿಕೊಂಡಿದ್ದ ನೂತನ ಕ್ಯಾಲೆಂಡರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರವಾಡದ ಅಧಿದೇವತೆ ಚಿಕ್ಕಪ್ಪಯ್ಯ ಮೊಟ್ಟಮೊದಲು ಕಾಲಜ್ಞಾನದ ಹಾಡುಗಳನ್ನು ಬರೆದು ಶ್ರೀಕಾರ ಹಾಕಿದರು. ನಂತರ ಈ ಪರಂಪರೆಯನ್ನು ಆತನ ಕೃಪಾಪುತ್ರ ಸದಾಶಿವ ಮುತ್ಯ ಮುಂದುವರಿಸಿಕೊಂಡು ಬಂದರು. ಕಾಲಜ್ಞಾನದಲ್ಲಿ ಅವರು ಹೇಳಿದ ನುಡಿಗಳು ಇಂದಿಗೂ ಸತ್ಯವಾಗಿದೆ. ಪ್ರಸಕ್ತ ವರ್ಷದಲ್ಲಿ ಸಾವು&ನೋವು ಹೆಚ್ಚಾಗುತ್ತವೆ, ಹೊಸ ವ್ಯಾದಿ ಬರಲಿದೆ, ಅಪಘಾತಗಳು ಹೆಚ್ಚಾಗಲಿವೆ, ದೇಶ&ದೇಶಗಳ ನಡುವೆ ಯುದ್ಧ ಮುಂದುವರಿಯಲಿವೆ ಎಂದರು.

ಅಕ್ಕಮಹಾದೇವಿ ಸಹಕಾರಿ ಬ್ಯಾಂಕ್​ ಅಧ್ಯ ಉಮೇಶ ಬಳಬಟ್ಟಿ ಮಾತನಾಡಿ, ತ್ರಿಕಾಲ ಜ್ಞಾನ ಹೊಂದಿದ ಸಾರವಾಡದ ಶ್ರೀ ಮಠದ ಶಾಖಾ ಮಠ ಚಿಕ್ಕಬೇವನೂರ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಸಂತಸ ತಂದಿದೆ. ಗ್ರಾಮಸ್ಥರು ಪ್ರತಿ ವರ್ಷ ಜಾತ್ರಾ ಮಹೋತ್ಸವ ನೆರವೇರಿಸುವ ಜೊತೆಗೆ ಸಾಮೂಹಿಕ ವಿವಾಹ, ಧರ್ಮ ಸಭೆಗಳನ್ನು ಏರ್ಪಡಿಸಿ ಬಡವರಿಗೆ ಆಸರೆಯಾಗಬೇಕು ಎಂದರು.

ಮಲ್ಲಿಕಾರ್ಜುನ ಬಿರಾದಾರ, ರಾಚು ಹಂಜಗಿ, ಶಂಕರ ದೇಸಾಯಿ, ಅಶೋಕ ಅಗಸರ, ಸತೀಶ ಮದರಖಂಡಿ, ಶಶಿಕಾಂತ ಬಿರಾದಾರ, ಶಿವಾನಂದ ವರವಂಟಿ, ಶರಣು ಜಂಬಗಿ, ಶ್ರೀಶೈಲ ಮುಟಗೇರ, ವಿನೋದ ಉಮ್ಮರ್ಜಿ, ಸುನೀಲ ಮದರಖಂಡಿ, ಶಿವಾನಂದ ಕರ್ಕಿ ಮತ್ತಿತರರಿದ್ದರು. ಜಯಕುಮಾರ ಜಂಬಗಿ ನಿರ್ವಹಿಸಿದರು.