ಜಿಲ್ಲೆ

ದೇಶದ ಸಂಸ್ಕೃತಿ ವಿಶ್ವ ಶ್ರೇಷ್ಠ

ಪರಶುರಾಮಪುರ: ಭಾರತೀಯ ಸಂಸ್ಕೃತಿ ಇಡೀ ವಿಶ್ವದಲ್ಲೇ ಶ್ರೇಷ್ಠವಾಗಿದೆ ಎಂದು ವಿಶ್ವಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ರಾಜಕುಮಾರ ಹೇಳಿದರು.

ಶ್ರೀಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಗ್ರಾಮದ ಕಲ್ಯಾಣದುರ್ಗ ರಸ್ತೆಯ ಸರ್ ಸಿ.ವಿ.ರಾಮನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಕೃಷ್ಣ ಪರಮಾತ್ಮನ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ನ್ಯಾಯ ಮತ್ತು ಧರ್ಮದ ಪರವಾಗಿ ವರ್ತಿಸಿದ ಕೃಷ್ಣ ನಮ್ಮೆಲ್ಲರಿಗೂ ಮಾದರಿ ಆಗಿದ್ದಾನೆ ಎಂದರು.

ಮುಖ್ಯಶಿಕ್ಷಕ ಜಿ.ಹನುಮಂತರಾಯಪ್ಪ, ಗುರುಸ್ವಾಮಿ, ಎಸ್.ರೇಖಾ, ಲತಾ, ಕರಿಯಮ್ಮ, ನೇತ್ರಾ, ಅನಿತಾ, ಮುರಳಿ, ನಾಗಮಣಿ ಇತರರಿದ್ದರು.