ಜಿಲ್ಲೆ

ಮಂತ್ರಿ ಮಾಲ್ ವಶಕ್ಕೆ ಪಡೆಯಬೇಡಿ ಎಂದು ಕೋರ್ಟ್​ ಹೇಳಿಲ್ಲ: ಬಿಬಿಎಂಪಿ

ಬೆಂಗಳೂರು: ಮಂತ್ರಿ ಮಾಲ್ ಹಾಗೂ ಮಂತ್ರಿ ಗ್ರೀನ್ ಅಪಾರ್ಟ್ ಮೆಂಟ್ ಕಟ್ಟಡ ತೆರವು ಮಾಡಲು ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ. ಆದರೆ, ವಶಕ್ಕೆ ಪಡೆಯದಂತೆ ಆದೇಶ ನೀಡಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

ಮಂತ್ರಿ ಮಾಲ್ ಹಾಗೂ ಮಂತ್ರಿ ಗ್ರೀನ್ ಅಪಾರ್ಟ್ ಮೆಂಟ್​ನಿಂದ ಬಿಬಿಎಂಪಿಗೆ ಸೇರಿದ 3.31 ಎಕರೆ ಹಾಗೂ ಜಕ್ಕರಾಯನ ಕೆರೆಯ 38 ಗುಂಟೆ ಸರ್ಕಾರಿ ಜಾಗ ಸೇರಿ ಒಟ್ಟು 4.29 ಎಕರೆ ಭೂಮಿ ಒತ್ತುವರಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಸಕ್ಷಮ ಪ್ರಾಧಿಕಾರ ತೆರವು ಮಾಡಲು ಸೂಚನೆ ನೀಡಿತ್ತು. ಒತ್ತುವರಿಯಲ್ಲಿ ನಿರ್ವಿುಸಲಾದ ಕಟ್ಟಡವನ್ನು 4 ವಾರ ತೆರವು ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಆದರೆ, ವಶಕ್ಕೆ ಪಡೆಯಬೇಡಿ ಎಂದು ತಿಳಿಸಿಲ್ಲ. ಹಾಗಾಗಿ ಮಂತ್ರಿ ಗ್ರೀನ್ ಎರಡು ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿರುವವರ ಪಟ್ಟಿ ಮಾಡಲಾಗಿದ್ದು, ಶೀಘ್ರವಾಗಿ ತೆರವುಗೊಳಿಸಿ ಕಟ್ಟಡ

ವಶಕ್ಕೆ ಪಡೆಯಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬಿಬಿಎಂಪಿಗೆ ಸೇರಿದ 3.31 ಎಕರೆ ಹಾಗೂ ಜಕ್ಕರಾಯನ ಕೆರೆಯ 38 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಜಾಗ ಬಿಬಿಎಂಪಿ ವಶಕ್ಕೆ ಬರಲಿದೆ. ಮಂತ್ರಿ ಗ್ರೀನ್ ಅಪಾರ್ಟ್ ಮೆಂಟ್ ನಿರ್ವಿುಸಿ ಮಾರಾಟ ಮಾಡಿದ ಹಮಾರಾ ಶೆಲ್ಟರ್ಸ್ ಸಂಸ್ಥೆಯೇ ಎಲ್ಲ ಸಂತ್ರಸ್ತರಿಗೂ ಬಡ್ಡಿ ಸಮೇತ ಹಣ ನೀಡಬೇಕು. | ಎನ್.ಆರ್. ರಮೇಶ್, ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷ