xr:d:DAGCZArotFg:2,j:580263296364659320,t:24041412 
ಜಿಲ್ಲೆ

ದೇಶದ ಪ್ರಗತಿಯ ಕನಸು ಕಂಡಿದ್ದ ನಾಯಕ

ರುದ್ರಪ್ಪ ವಾಲಿ

ಹರಪನಹಳ್ಳಿ: ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಹಿಂದಿನ ದೊಡ್ಡ ಶಕ್ತಿಯಾಗಿದ್ದರು ಎಂದು ಪಿಎಸ್‌ಐ ಶಂಭುಲಿಂಗ ಸಿ.ಹಿರೇಮಠ್ ಹೇಳಿದರು.
ಪಟ್ಟಣದ ಬಾಪೂಜಿ ನಗರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಣೆ ಅಂಗವಾಗಿ ತಾಲೂಕು ದಲಿತ ಸಂಘರ್ಷ ಸಮಿತಿ ಭೀಮವಾದ ಸಮಿತಿಯಿಂದ 5ನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದೆ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪವಾಗಿದೆ ಎಂದರು.

ಮಹಾನ್ ಚೇತನ

ಪುರಸಭೆ ಸದಸ್ಯ ಎಚ್.ಎಂ.ಅಶೋಕ ಹರಾಳ್ ಮಾತನಾಡಿ, ಡಾ.ಬಾಬಾ ಸಾಹೇಬ್‌ಅಂಬೇಡ್ಕರ್ ಅವರು ಅಧಿಕಾರದ ಹಂಚಿಕೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಿದರು. ಸಮಾಜದಲ್ಲಿ ಅತ್ಯಂತ ನೋವು-ದುಃಖ ಅಪಮಾನದಿಂದ ಬದುಕುವ ಸರ್ವ ಜನಾಂಗಕ್ಕೆ ತನ್ನ ಜೀವನವನ್ನು ಅರ್ಪಣೆ ಮಾಡಿದ ಮಹಾನ್ ಚೇತನ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎ.ಕೆ.ಹುಚ್ಚಪ್ಪ ಮಾತನಾಡಿದರು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಬಾಪೂಜಿನಗರದ ವಿದ್ಯಾರ್ಥಿಗಳಾದ ಅಳಗಂಚಿಕೇರಿ ಪ್ರಜ್ವಲ್, ಅಳಗಂಚಿಕೇರಿ ಸಂಜನಾ, ಬಂಗಿ ಲಕ್ಷ್ಮೀ, ಡಿ.ಅಶ್ವಿನಿ, ಕೆ.ಮನೋಜ, ಕೆ.ಮುರುಳಿ, ಅಳಗಂಚಿಕೇರಿ ಆಕಾಶ ಇತರರಿದ್ದರು. ದಲಿತ ಸಂಘರ್ಷ ಸಮಿತಿ ಭೀಮವಾದ ಅಧ್ಯಕ್ಷ ಕೆ.ಸುಭಾಶ್, ಡಿಎಸ್‌ಎಸ್ ತಾಲೂಕು ಉಪಾಧ್ಯಕ್ಷ ಸಿ.ಪ್ರಕಾಶ, ಪ್ರಧಾನ ಕಾರ್ಯದರ್ಶಿ ಪೂಜಾರ ಮಲ್ಲಿಕಾರ್ಜುನ, ರಿಯಾಜ್, ಖಾಜಾಸಾಬ್, ಸೈಯದ್ ರ್ಇಾನ್, ನಾಲಬಂದ್ ಭಾಷಾ, ಪೂಜಾರ್ ನಿಂಗಪ್ಪ, ಬಿ.ಮಹೇಂದ್ರ ಕುಮಾರ್, ಹೆಗ್ಗಪ್ಪರ ಸುರೇಶ, ಜಿ.ಶ್ರೀಕಾಂತ, ಸವಣೂರ ಯಲ್ಲಪ್ಪ ಇತರರಿದ್ದರು.