ಜಿಲ್ಲೆ

ಆಂಗ್ಲರ ಕುತಂತ್ರಕ್ಕೆ ದೇಶ ಇಬ್ಭಾಗ

ಚಿತ್ರದುರ್ಗ: ಅಖಂಡ ಭಾರತ ಬ್ರಿಟಿಷರ ಕುತಂತ್ರದಿಂದಾಗಿ ಭಾರತ, ಪಾಕಿಸ್ತಾನ, ಪೂರ್ವ ಪಾಕಿಸ್ತಾನವಾಗಿ ಮೂರು ಇಬ್ಬಾಗವಾಯಿತು ಎಂದು ಎಂಎಲ್ಸಿ ಕೆ.ಎಸ್.ನವೀನ್ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದಿಂದ ಪಕ್ಷದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ದೇಶ ವಿಭಜನೆ ಒಂದು ದುರಂತ ಕಥೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಮಿಷವೊಡ್ಡುವ ಮೂಲಕ ಬ್ರಿಟಿಷರು ವಿಭಜಿಸಿದರು. ಆದರೆ, ದೇಶದ ಪರ ಸಂಧಾನಕ್ಕೆ ಹೋಗಿ ಅಂದು ಪ್ರಧಾನಿ ಆಗಲೇಬೇಕೆಂಬ ವ್ಯಾಮೋಹದಿಂದ ಭಾರತ ಇಬ್ಬಾಗವಾಗಲು ಯಾರು ಕಾರಣ ಎಂಬುದು ರಾಷ್ಟ್ರಕ್ಕೆ ಗೊತ್ತಿದೆ ಎಂದರು.

ಹತ್ತು ಲಕ್ಷಕ್ಕೂ ಅಧಿಕ ಹೋರಾಟಗಾರರ ಬಲಿದಾನವಾಯಿತು. ಸ್ವಾತಂತ್ರ್ಯಕ್ಕೂ ಮುನ್ನ ಅನೇಕರು ಪ್ರಾಣ ಅರ್ಪಿಸಿದ್ದಾರೆ. ಸ್ವಾತಂತ್ರ್ಯ ಲಭಿಸಿತೆಂದು ಸಂಭ್ರಮಿಸುವುದು ಒಂದು ಕಡೆಯಾದರೆ, ಕಹಿ ಘಟನೆಗಳಿಗೆ ಕಾರಣವಾದ ವಿಭಜನೆಯ ವಿಷಯಗಳು ಪ್ರತಿಯೊಬ್ಬ ಭಾರತೀಯನಿಗೂ ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷರ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಕಾರ್ಯಕ್ರಮದ ಉಸ್ತುವಾರಿ ಸಂಪತ್‌ಕುಮಾರ್, ನಗರ ಅಧ್ಯಕ್ಷ ನವೀನ್ ಚಾಲುಕ್ಯ, ಖಜಾಂಚಿ ಮಾಧುರಿ ಗಿರೀಶ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಕೆ.ಶಿವಣ್ಣಚಾರ್, ಮುಖಂಡರಾದ ವೆಂಕಟೇಶ್ ಯಾದವ್, ಕಿರಣ್‌ಕುಮಾರ್, ಬಾಂಡ್ ರವಿ, ಶಂಭು, ಶೈಲಜಾರೆಡ್ಡಿ, ಕವನಾ, ಚಂದ್ರಿಕಾ ಲೋಕನಾಥ, ವಸಂತ್‌ಕೃಷ್ಣ, ಹರೀಶ್ ಇತರರಿದ್ದರು.