ತಾವರಗೇರಾದಲ್ಲಿ ನಡೆಯಲಿರುವ ಶ್ರೀ ಸಿದ್ಧಾರೂಢ ಮಠದ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಕಗಲಗೊಂಬ ಮಠದ ಶ್ರೀ ಸ್ವರೂಪಾನಂದ ಸ್ವಾಮೀಜಿ ಚಾಲನೆ ನೀಡಿದರು. ಅನ್ನದಾನ ಶಾಸ್ತ್ರಿಗಳು, ಸಚ್ಚಿದಾನಂದ ಸ್ವಾಮೀಜಿ, ಪರಿಪೂರ್ಣಾನಂದ ಭಾರತಿ ಸ್ವಾಮೀಜಿ ಇದ್ದರು. 
ಜಿಲ್ಲೆ

ಸಿದ್ಧಾರೂಢ ಮಠಕ್ಕೆ ಶ್ರೀಗಳ ಪಟ್ಟಾಭಿಷೇಕ 18ಕ್ಕೆ

ತಾವರಗೇರಾ: ನಗರದ ಶ್ರೀ ಸಿದ್ಧಾರೂಢ ಮಠಕ್ಕೆ ಶ್ರೀಗಳ ಪಟ್ಟಾಭಿಷೇಕ ಫೆ.18ರಂದು ನಡೆಯಲಿದ್ದು, ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಸಿದ್ಧಾರೂಢ ವಚನಾಮೃತ ಪ್ರವಚನ ಕಾರ್ಯಕ್ರಮ ಆರಂಭಿಸಲಾಗಿದೆ.

ಶ್ರೀಮಠದ ಮೂಲ ನಿರ್ಮಾತೃ ಲಿಂ.ಶ್ರೀ ಮಾನಸೇಂದ್ರ ಸ್ವಾಮೀಜಿ ಅವರ ಶ್ರದ್ಧೆ ಮತ್ತು ಭಕ್ತರ ಸಹಕಾರದಿಂದ ಮಠದ ಏಳಿಗೆ ಆಗಿದೆ. ಒಂಬತ್ತು ದಿನಗಳ ಸದ್ಗುರು ಸಿದ್ಧಾರೂಢರ ಚರಿತಾಮೃತ ಪ್ರವಚನ ಹಾಗೂ ಭಜನೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹರ ಗುರು ಚರ ಮೂರ್ತಿಗಳೊಂದಿಗೆ ಪಾದಯಾತ್ರೆ ನಡೆಯಲಿದೆ. ಕಗಲಗೊಂಬ ಮಠದ ಶ್ರೀ ಸ್ವರೂಪಾನಂದ ಸ್ವಾಮೀಜಿ, ವಿಜಯಪುರದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಬೆಳಗೋಡದ ಶ್ರೀ ಪರಿಪೂರ್ಣಾನಂದ ಭಾರತಿ ಸ್ವಾಮೀಜಿ, ಕಿಲಾರಹಟ್ಟಿಯ ಅಂಬಾ ಭವಾನಿ ಶಕ್ತಿ ಪೀಠದ ಶ್ರೀ ಹನುಮಂತ ಮಹಾರಾಜ ಸ್ವಾಮೀಜಿ ಇತರರಿದ್ದರು.